ಸಮಾಚಾರ

“ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳಲ್ಲ ” ಎಂದು ಪರೋಕ್ಷವಾಗಿ ತಮ್ಮ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ಉತ್ತರ ಕೊಟ್ಟ ನಟಿ ರಮ್ಯಾ.

ನಟಿ ಹಾಗೂ ಮಂಡ್ಯ ಮಾಜಿ ಸಂಸದೆ  ರಮ್ಯಾ ಸಿನಿಮಾ ಕ್ಷೇತ್ರ ಬಿಟ್ಟು ರಾಜಕೀಯಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಲೇ ಇದ್ದಾರೆ, ಇತ್ತೀಚಿಗೆ ದಿವಂಗತ ಅಂಬರೀಶ್ ರವರ ಅಂತ್ಯ ಸಂಸ್ಕಾರಕ್ಕೆ ಬಾರದ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಹಾಗೂ ಕಳೆದ ಬಾರಿ ಮಂಡ್ಯ ಕ್ಷೇತ್ರದಲ್ಲಿ ನಡೆದ ಮತದಾನಕ್ಕೂ ಬಾರದ ರಮ್ಯಳ ಬಗ್ಗೆಯೂ ಜನರಲ್ಲಿ ಅಗಾಧ ಕೋಪವಿತ್ತು. ಈ ಎರಡು ವಿಚಾರಗಳನ್ನು ನೆನಪಿನಲ್ಲಿಟ್ಟು ಕೊಂಡಿದ್ದ ಜನ ಸಾಮಾಜಿಕ ತಾಣಗಳಲ್ಲಿ ರಮ್ಯಾ ಳ ಈ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ತನ್ನ ನಡೆಯ ಬಗ್ಗೆ ಆರೋಪಗಳ ಸುರಿಮಳೆ ಆಗಿದ್ದನು ಕಂಡ ಮಂಡ್ಯ ಮಾಜಿ ಸಂಸದೆ ತನ್ನ ಮೇಲಿನ ಆರೋಪಗಳಿಗೆ ಪ್ರತ್ಯುತ್ತರ ನೀಡಿದ್ದು, ಹಕ್ಕಿಯ ಹಿಕ್ಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ತಮ್ಮ ಇನ್‍ ಸ್ಟಾಗ್ರಾಮ್‍ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ರಮ್ಯಾ, ತಾವು ಚಿಕಿತ್ಸೆ ಪಡೆದ ಬಳಿಕ ಸದ್ಯ ಆರೋಗ್ಯವಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಇದರೊಂದಿಗೆ ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಸ್ಟೇಟಸನ್ನು ಅಪ್ಲೋಡ್ ಮಾಡಿ ಎಲ್ಲರ ಟೀಕೆಗೆ ತಿರುಗೇಟು ನೀಡಿದ್ದಾರೆ.

&nbsp

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top