ಹೆಚ್ಚಿನ

1, 2, 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಲು ಎಷ್ಟು ಖರ್ಚಾಗುತ್ತದೆ ಗೊತ್ತಾ ?

ನಾಣ್ಯಗಳಿಗೆ ಅದರದೇ ಆದ ಬೆಲೆಗಳಿವೆ. ಆದರೆ ನಾಣ್ಯಗಳ ಮೌಲ್ಯಗಳನ್ನು ಅರಿಯದೆ ಅದನ್ನು ಕಡೆಗಣಿಸುವರೇ ಹೆಚ್ಚು. ನೀವು ಬೇಕಾದರೆ ಈ ಮಕ್ಕಳ ಕೈಗೆ ಒಂದು ರೂ ಕೊಟ್ಟು ಚಾಕಲೇಟ್ ತೆಗೆದುಕೊಳ್ಳೋಕೆ ಹೇಳಿ, ಅವರು ಖಂಡಿತವಾಗಿ ಆ ಒಂದು ರೂ ಅನ್ನು ನಿಮಗೆ ಹಿಂದುರಿಗಿಸಿ ನೀವೇ ತೆಗೆದುಕೊಳ್ಳಿ ಈ ಒಂದು ರೂ ಗೆ ಏನು ಬರುತ್ತದೆ ಎಂದು ಸಲೀಸಾಗಿ ಹೇಳಿ ಬಿಡುತ್ತಾರೆ. ಹೌದು, ಪ್ರಸ್ತುತ ಪ್ರಪಂಚದಲ್ಲಿ ನೋಟಿಗಿರುವ ಬೆಲೆ ನಾಣ್ಯಕ್ಕಿಲ್ಲ. ಆದರೆ ಯಾವತ್ತಾದರೂ ಒಂದು ದಿನ ಕುಳಿತು ಈ ನಾಣ್ಯಗಳನ್ನು ತಯಾರಿಸಲು ಅಥವಾ ಟಂಕಿಸಲು ಎಷ್ಟು ಖರ್ಚಾಗುತ್ತದೆ ಎಂದು ಯೋಚನೆ ಮಾಡಿದ್ದೀರಾ?

ಇಲ್ಲದೆ ನಿಮ್ಮ ಪ್ರಶ್ನೆಗೆ ಉತ್ತರ :

ಕೆಲ ದಿನಗಳ ಹಿಂದೆ ನಾಣ್ಯಗಳನ್ನು ಟಂಕಿಸಲು ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರ ಎಲ್ಲ ರೀತಿಯ ಮುಖ ಬೆಲೆಯ ನಾಣ್ಯಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎನ್ನುವ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ಯಾವ ನಾಣ್ಯಕ್ಕೆ ಎಷ್ಟು ವೆಚ್ಚ ಗೊತ್ತಾ?

1, 2, 5 ಹಾಗೂ 10 ರೂ. ಮುಖಬೆಲೆಯ ನಾಣ್ಯಗಳನ್ನು ಟಂಕಿಸಿ ಮಾರುಕಟ್ಟೆಗೆ ಬಿಡುಗಡೆಮಾಡುವ ಕೆಲಸವನ್ನು ಆರ್‌ಬಿಐ ಮಾಡುತ್ತಿದೆ. 1 ರೂ ನಾಣ್ಯಕ್ಕೆ 1.11 ರೂ,   2 ರೂ. ನಾಣ್ಯಕ್ಕೆ 1.20 ರೂ , 5 ರೂ. ನಾಣ್ಯಕ್ಕೆ 3.69 ರೂ, ಮತ್ತು 10 ರೂ. ನಾಣ್ಯಕ್ಕೆ 5.54 ರೂ. ವೆಚ್ಚ ಮಾಡಬೇಕಾಗುತ್ತಡೇ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top