ಸಮಾಚಾರ

ಶ್ರೀಗಳ ಆರೋಗ್ಯದ ಹೊಣೆ ಹೊತ್ತಿರುವ ಡಾ.ಮೊಹ್ಮದ್ ರೇಲಾ ಯಾರು ಗೊತ್ತಾ?

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ಏರ್ ಅಂಬುಲೆನ್ಸ್ ಮೂಲಕ ಅವರನ್ನು ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ಲಿವರ್ (ಯಕೃತ್) ಕಸಿ ಶಸ್ತ್ರಚಿಕಿತ್ಸೆಯಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ.

1997ರಲ್ಲಿ ಬೇಬೆನ್ ಶಟ್ಕೆ ಕೇವಲ 5 ದಿನದ ಮಗುವಿದ್ದಾಗ ಡಾ. ಮೊಹ್ಮದ್ ರೇಲಾ ಲಂಡನ್‌ನಲ್ಲಿ ಈಕೆಗೆ ಯಕೃತು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆ ಸುದ್ದಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಚೆನ್ನೈನ ಡಾ. ಮೊಹ್ಮದ್ ರೇಲಾ ಅವರೇ ಇದೀಗ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಇದೇ ರೇಲಾ ಇದೀಗ ನಡೆದಾಡುವ ದೇವರ ಆರೋಗ್ಯದ ಜವಾಬ್ದಾರಿ ಹೊತ್ತಿದ್ದಾರೆ. ಶತಾಯುಷಿ, ನಡೆದಾಡುವ ದೇವರು ಎಂದೇ ಖ್ಯಾತಿಗಳಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೃದಯದಲ್ಲಿ ಅಳವಡಿಸಲಾದ 11 ಸ್ಟೆಂಟ್ ಗಳನ್ನು ಬದಲಿಸುವ ಅಗತ್ಯವಿದೆ. ಹಾಗಾಗಿ ಅವರನ್ನು ಚೆನ್ನೈ ಆಸ್ಪತ್ರೆಗೆ ಕರೆದೊಯ್ಯಲಿದೆ.

ಐದು ದಿನಗಳ ಹಿಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಎರಡು ಸ್ಟಂಟ್ ಅಳವಡಿಕೆ ಬಳಿಕ ಮಠಕ್ಕೆ ಹಿಂದಿರುಗಿದ್ದ ಸ್ವಾಮೀಜಿ ಆರೋಗ್ಯವಾಗಿದ್ದರು. ಆದರೆ, ಬುಧವಾರ ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಬಿಜಿಎಸ್ ಆಸ್ಪತ್ರೆ ಹಾಗೂ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top