ಭವಿಷ್ಯ

ನಿಮ್ಮ ಮನೆಯಲ್ಲಿ ಹಣದ ತೊಂದರೆ ಇದ್ರೆ ಅದನ್ನು ಹೋಗಲಾಡಿಸೋಕೆ ಈ 6 ಪರಿಹಾರಗಳನ್ನು ಮಾಡಿ

ನಿಮ್ಮ ಮನೆಯಲ್ಲಿ ಹಣದ ಅಭಾವವಿದ್ದರೆ ಅದನ್ನು ಹೋಗಲಾಡಿಸಲು ಈ 6 ಪರಿಹಾರಗಳನ್ನು ಪ್ರಯತ್ನಿಸಿ ಆಗ ಸ್ವತಃ ನೀವೇ ಬದಲಾವಣೆಯನ್ನು ಕಾಣುತ್ತೀರಾ .
ಯಾರಿಗೆ ತಾನೇ ಐಶ್ವರ್ಯ, ಹಣ,ಸಿರಿ,ಸಂಪತ್ತು ತುಂಬಿದ ಜೀವನ ನಡೆಸಲು ಇಷ್ಟವಿಲ್ಲ ಹೇಳಿ.ನೀವು ಜೀವನದಲ್ಲಿ ತುಂಬಾ ಕಷ್ಟ ಪಟ್ಟು ದುಡಿದರು ಹಣವನ್ನು ಗಳಿಸಲು ಆಗುತ್ತಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ಈ ಸಣ್ಣ ಪುಟ್ಟ ಬದಲಾವಣೆಗಳನ್ನು ಮನೆಯಲ್ಲಿ ಮಾಡಿಕೊಳ್ಳಿ.

ಮನೆಯಲ್ಲಿ ಹಣದ ಅಭಾವ ಬರುವುದು ವಾಸ್ತು ದೋಷದ ಕಾರಣದಿಂದಾಗಿ.ಈ ದೋಷದಿಂದ ಮುಕ್ತಿ ಪಡೆಯಲು,ವಾಸ್ತು ತಜ್ಞರು ಕೆಲವು ವಿಷಯಗಳಲ್ಲಿ ಎಚ್ಚರದಿಂದಿರಲು ಹೇಳುತ್ತಾರೆ.ಇಂದು ನಾವು ನಿಮಗೆ ಕೆಲವು ಸರಳವಾದ ಪರಿಹಾರಗಳನ್ನು ಹೇಳುತ್ತೇವೆ.ಅವುಗಳನ್ನು ನೀವು ಸಹ ಮಾಡಬಹುದು.ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಅದು ಹಣದ ಹರಿವನ್ನು ಹೆಚ್ಚಿಸುತ್ತದೆ.ಇದೆಲ್ಲಕ್ಕಿಂತ ಹೆಚ್ಚಾಗಿ ನಾವು ಅಧಿಕ ಸಮಯವನ್ನು ಕಳೆಯುವುದು ಮನೆಯಲ್ಲಿಯೇ. ನಾವು  ನಮ್ಮ ಜೀವನದ ಅತೀ ಹೆಚ್ಚು  ಸಮಯವನ್ನು ಕಳೆಯುವುದು ಮನೆಯಲ್ಲಿ  ಮತ್ತು ಎಲ್ಲರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಬೇಕು ಮತ್ತು ನಿಮ್ಮ ಜೀವನದಲ್ಲಿ ಸಿರಿ ಸಂಪತ್ತು ಹೊಂದಬೇಕು ಎಂದರೆ ವಿಶೇಷ ಗಮನವನ್ನು ನೀಡಬೇಕು.

 

ಮಲಗುವ ಕೋಣೆಯ ಗೋಡೆಗಳು:ವಾಸ್ತು ಪ್ರಕಾರ ,ಮಲಗುವ ಕೋಣೆಯೊಂದೇ ಅದು  ಅದೃಷ್ಟ ಮತ್ತು ಸಂಪತ್ತು ಎರಡನ್ನು ವೃದ್ಧಿಗೊಳಿಸುವ ಸ್ಥಳ ಆದ್ದರಿಂದ ಅಲ್ಲಿರುವ ಗೋಡೆಗಳು ಬಿರುಕು ಬಿಟ್ಟಿರಬಾರದು,ಒಡೆದಿರಬಾರದು,ಸುಣ್ಣ ಬಣ್ಣಗಳು  ಒಣಗಿ ಉದುರಿ ಹೋಗುತ್ತಿರಬಾರದು.ಹಳೆಯ ಬಣ್ಣವಾಗಿದ್ದರೆ ಅವುಗಳನ್ನು ಬದಲಾಯಿಸಿ ಹೊಸ ಬಣ್ಣವನ್ನು ಗೋಡೆಗಳಿಗೆ ಬಳಿಸಬೇಕು. ಇಂತಹ ಬಿರುಕು ಹೊಡೆದ ಗೋಡೆ ಇದ್ದರೆ ಬೇಗನೆ ಸರಿಮಾಡಿಸಿ ವಾಸ್ತು ದೋಷವನ್ನು ದೂರ ಮಾಡಿ ಅವುಗಳಿಂದ ಲಾಭ ಪಡೆಯಿರಿ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಿಕೊಳ್ಳಿ.

 

 

 

ಶಂಖ ಮತ್ತು  ಲಕ್ಷ್ಮೀ ಕವಡೆ:ಮನೆಯಲ್ಲಿ ಒಂದು ದಕ್ಷಿಣಾವರ್ತಿ ಶಂಖ ಮತ್ತು ಕವಡೆಗಳನ್ನು ನಿಮ್ಮ ಪೂಜಾ ಕೋಣೆಯಲ್ಲಿ ಇಡಬೇಕು.ಇಟ್ಟು ಪೂಜೆಯನ್ನು ಸಲ್ಲಿಸಬೇಕು.ಇವೆರಡೂ ಕೂಡ ಲಕ್ಷ್ಮೀಯ ಸಹೋದರರು.ಸಮುದ್ರ ಮಂಥನದ ಸಮಯದಲ್ಲಿ ಜನಿಸಿದಳು ಲಕ್ಷ್ಮೀ ದೇವಿ.ಆದ್ದರಿಂದ ಲಕ್ಷ್ಮೀ ದೇವಿಯನ್ನು ಸಮುದ್ರ ರಾಜನ ಮಗಳು ಎಂದು ಸಹ ಕರೆಯುತ್ತಾರೆ.ಅವಳು ಸಮುದ್ರದಿಂದ ಜನಿಸುವ ಸಮಯದಲ್ಲೇ  ಶಂಖ ಮತ್ತು ಕವಡೆ ಕೂಡ ಸಮುದ್ರ ಮಂಥನದ ಸಮಯದಲ್ಲೇ ಜನಿಸಿದವು.ಆದ್ದರಿಂದ ಶಂಖ ಮತ್ತು ಕವಡೆಯನ್ನು ಮನೆಯಲ್ಲಿಟ್ಟರೆ ಅದು ಸಂಪತ್ತನ್ನು ಆಹ್ವಾನಿಸುತ್ತದೆ.

ಮುರಿದು ಹೋದ ಮೇಜು, ಕುರ್ಚಿಗಳು ಮತ್ತು ಮರದ ಸಾಮಾನುಗಳು:ಮನೆಯಲ್ಲಿ ಮುರಿದು ಹೋದ ಮೇಜುಗಳು ,ಕುರ್ಚಿಗಳು ಮತ್ತು ಮರದ ಸಾಮಾನುಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದರಿಂದ ಅವು ನಕಾರಾತ್ಮಕ ಶಕ್ತಿಯನ್ನು ಮನೆಯೊಳಗೆ ಹೆಚ್ಚಿಸುತ್ತವೆ.ಆಗ ಹಣವು ನಷ್ಟವಾಗಿ ಹಣದ ಕೊರತೆಯುಂಟಾಗುತ್ತದೆ ಆದ್ದರಿಂದ ಅಂತವುಗಳನ್ನು ಈಗಲೇ ಮನೆಯಿಂದ ಹೊರಗೆ ಹಾಕಿ.

ನಲ್ಲಿಯಿಂದ ನೀರು ಸೋರುತ್ತಿರುವುದು:ನಲ್ಲಿಯಿಂದ ನೀರು ಹನಿಹನಿಯಾಗಿ ತೊಟ್ಟಿಕ್ಕುತ್ತಿದ್ದರೆ ಅಥವಾ ಸೋರುತ್ತಿದ್ದರೆ ಅದು ವಾಸ್ತು ದೋಷವನ್ನು ಉಂಟುಮಾಡುತ್ತದೆ.ಹಾಗೆ ನೀವು ಮನೆಗಳಲ್ಲಿ ನಲ್ಲಿಯನ್ನು ಉಪಯೋಗಿಸಿದ ನಂತರ ಅದನ್ನು ಸರಿಯಾಗಿ ನಿಲ್ಲಿಸದೇ ಇದ್ದರೆ,  ಹಾಗೆ ನೀರನ್ನು ಬಿಟ್ಟು ಬರುವ ಅಭ್ಯಾಸವಿದ್ದರೆ ಈಗಲೇ  ಇಂತ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ,ಇಂತಹ ಸ್ಥಿತಿಯಿದ್ದರೆ ಬೇಗನೇ ನಕಾರಾತ್ಮಕ ಶಕ್ತಿಗಳು  ಆಕರ್ಷಣೆಯಾಗಿ ಹಣದ ನಷ್ಟವನ್ನು ಉಂಟುಮಾಡುತ್ತವೆ ಆದ್ದರಿಂದ ನೀರು ಸೋರುತ್ತಿದ್ದರೆ ತಕ್ಷಣವೇ ಸರಿ ಮಾಡಿಸಿ.

 

ಹಣ ಇಡುವ ಸ್ಥಳಕ್ಕೆ ವಾಸ್ತು:ನೀವು ಹಣವನ್ನು ಇಡುವ ಸ್ಥಳಗಳಾದ ಹಣವನ್ನು ಇಟ್ಟು ಬೀಗ ಹಾಕುವ ಪೆಟ್ಟಿಗೆ,ಅಲ್ಮಿರಾಗಳನ್ನು ಎಚ್ಚರವಾಗಿ ನೋಡಿಕೊಳ್ಳಿ ಅದನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಿ ಆಗ ನಾವು ಅದರ ಬಾಗಿಲನ್ನು ತೆರೆದಾಗ ಅದು ಉತ್ತರ ದಿಕ್ಕಿನ ಕಡೆಗೆ  ಮುಖ ಮಾಡಿರಬೇಕು ಹೀಗೆ ನಿಮ್ಮ ಮನೆಯಲ್ಲಿ ಬೀರುಗಳನ್ನು  ಜೋಡಿಸಬಹುದು.

ಪೂಜೆಯ ಕೋಣೆಗೆ ವಾಸ್ತು:ವಾಸ್ತು ಪ್ರಕಾರ,ಪ್ರತಿಯೊಂದು  ಮನೆಯೂ ಪೂಜಾ ಕೋಣೆಯನ್ನು ಹೊಂದಿರಬೇಕು.ಅದು ಉತ್ತರ ಪೂರ್ವ ದಿಕ್ಕಿನಲ್ಲಿ ಇರಬೇಕು.ಹಳದಿ ಬಣ್ಣದ ಬಲ್ಬನ್ನು  ಪ್ರಾರ್ಥನೆ ಮಾಡುವ ಸ್ಥಳದಲ್ಲಿ  ಬೆಳಗಿಸಬೇಕು . ಮನೆಯ ಮುಖ್ಯ ಪೂಜೆ ಮಾಡುವ  ಕೋಣೆಗೆ ಶುದ್ಧ ಹಾಲಿನಷ್ಟೇ ಪರಿಶುದ್ಧವಾದ ಬಿಳಿಯ ಬಣ್ಣದ ಬಲ್ಬನ್ನು ಬೆಳಗಿಸಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top