ಸಮಾಚಾರ

ಆಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ದಲ್ಲಿ ‘ ಹಸಿರು ಥೀಮ್ ‘ ಸೆಟ್ – ಅತಿಥಿಗಳಾಗಿ ಬರಲಿವೆಯಂತೆ 50 ಗೋವುಗಳು

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ರವರು ತಾವು ಪ್ರೀತಿಸಿದ ಹುಡುಗಿಯೊಂದಿಗೆ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು, ನಿಶ್ಚಿತಾರ್ಥದ ಸಿದ್ದತೆಯಲ್ಲಿ ಇಡೀ ಕುಟುಂಬ ಬ್ಯುಸಿ ಆಗಿದ್ದಾರೆ. ನಾಳೆ ಅಂದರೆ ಡಿಸೆಂಬರ್ 9 ರಂದು ಆಕ್ಷನ್ ಪ್ರಿನ್ಸ್ ತಾವು ಪ್ರೀತಿಸಿದ ಬಾಲ್ಯದ ಗೆಳತೀ ಪ್ರೇರಣಾ ಶಂಕರ್ ರವರೊಂದಿಗೆ ಎಂಗೇಜ್ ಆಗಲಿದ್ದಾರೆ.

ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದ ಆವರಣದಲ್ಲಿ ದ್ರುವ ಸರ್ಜಾ ರವರ ಎಂಗೇಜ್ಮೆಂಟ್ ಗೆ ಅಂತಲೇ ಅರುಣ್ ಸಾಗರ್ ಸಾರಥ್ಯದಲ್ಲಿ ಸೆಟ್ ಹಾಕಲಾಗುತ್ತಿದ್ದು. ಈ ಸೆಟ್ ನ ವಿಶೇಷತೆ ಏನೆಂದರೆ , ಈ ಸೆಟ್ ಸಂಪೂರ್ಣವಾಗಿ ಹಸಿರಿನಲ್ಲಿ ಕಂಗೊಳಿಸಲಿದೆ . ಹೌದು, “ಹಸಿರು ಥೀಮ್‍” ನಲ್ಲಿ ತೆಂಗಿನ ಗರಿಗಳಿಂದ ನಿರ್ಮಾಣವಾಗುತ್ತಿರುವ ಈ ಸೆಟ್‍ಗೆ ಸಾಂಪ್ರದಾಯಿಕ ಪರಿಕರಗಳನ್ನೇ ಡೆಕೋರೇಷನ್‍ ಗಾಗಿ ಉಪಯೋಗಿಸಲಾಗುತ್ತಿದೆಯಂತೆ.

ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ಜಾ ಕುಟುಂಬ ಸಂಪೂರ್ಣವಾಗಿ ಭಾಗಿಯಾಗಲಿದೆಯಂತೆ.

ಧ್ರುವ ಸರ್ಜಾ ರ ನಿಶ್ಚಿತಾರ್ಥ ದಲ್ಲಿ ಇನ್ನೊಂದು ವೈಶಿಷ್ಟ್ಯವಿದ್ದು ತಮ್ಮ ನಿಶ್ಚಿತಾರ್ಥಕ್ಕೆ 50 ಗೋವುಗಳನ್ನ ಕರೆಸಿ ಗೋ ಪೂಜೆ ಮಾಡಿ ವಿಭಿನ್ನ ರೀತಿಯಲ್ಲಿ ಧ್ರುವ ಸರ್ಜಾ ತಮ್ಮ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ.

ಧ್ರುವಾ ಸರ್ಜಾ ತಮ್ಮ ಎಂಗೇಜ್ಮೆಂಟ್ ಕಾರ್ಡ್ ಕೂಡ ಸಿಂಪಲ್ ಆಗಿ ಮಾಡಿಸಿದ್ದು, ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ ಫೋಟೋ ಜೊತೆಗೆ ಎಂಗೇಜ್ಮೆಂಟ್ ನಡೆಯುವ ಸ್ಥಳದ ಹಾಗೂ ಸಮಯದ ವಿವರಗಳನ್ನು ನೀಡಲಾಗಿದೆ.

 

ಒಟ್ಟಿನಲ್ಲಿ ಧ್ರುವಾ ಸರ್ಜಾ ರ ಎಂಗೇಜ್ಮೆಂಟ್ ಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top