fbpx
ಸಿನಿಮಾ

ದುನಿಯಾ ವಿಜಿಗೆ ಎದುರಾಯ್ತು ಮತ್ತೊಂದು ಸಂಕಷ್ಟ-ರಾಜ್ಯ ಮಹಿಳಾ ಆಯೋಗ ನೋಟಿಸ್‌ ಜಾರಿ

ನಟ ದುನಿಯಾ ವಿಜಯ್ ಕುಟುಂಬದ ಸಮಸ್ಯೆಗಳು ಇನ್ನೇನು ಪರಿಹಾರದ ಹಂತ ತಲುಪಿರಬೇಕು ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಮತ್ತೇ ಅವರ ಕುಟುಂಬದ ವಿಚಾರ ಅಥವಾ ಪ್ರಕರಣ ಜಗಜ್ಜಾಹೀರಾತಾಗಿದೆ. ಹಲವು ದಿನಗಳ ಕಾಲ ಮಾಧ್ಯಮಗಳ್ಲಲಿ ಸುದ್ದಿಯಾಗಿದ್ದ ವಿಜಿ ಕುಟುಂಬದ ವಿಚಾರ ಈಗ ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿದ್ದು ಮತ್ತೇ ದುನಿಯಾ ವಿಜಯ್ ಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ.

ದುನಿಯಾ ವಿಜಯ್ನಾ ಪತ್ನಿ ನಾಗರತ್ನ ಅವರು ಕಳೆದ ವಾರ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿ, ನನ್ನ ಪತಿ ವಿಜಯ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನಾನು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ದೂರು ನೀಡಿದ್ದಾರೆ.

ಪತ್ನಿ ನಾಗರತ್ನಾ ದೂರಿನ ಹಿನ್ನೆಲೆಯಲ್ಲಿ ನಟ ‘ದುನಿಯಾ’ ವಿಜಯ್‌ ಅವರಿಗೆ ರಾಜ್ಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ದುನಿಯಾ ವಿಜಯ್ ಗೆ ಮತ್ತೆ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.

ದೂರಿನಲ್ಲಿ ವಿಜಿ ಪತ್ನಿ ಕುಟುಂಬ ನಿರ್ವಹಣೆಗೆ ವಿಜಯ್‌ರಿಂದ ದೊರೆಯುತ್ತಿದ್ದ ಹಣವೂ ಈಗ ಸಿಗುತ್ತಿಲ್ಲ. ನಾವು ಸದ್ಯ ವಾಸಿಸುತ್ತಿರುವ ಮನೆಯನ್ನು ನನ್ನ ಗಮನಕ್ಕೆ ತಾರದೇ ಮಾರಾಟ ಮಾಡಲಾಗಿದೆ ಎಂದು ಬರೆದಿದ್ದರೆ ಎನ್ನಲಾಗಿದೆ. ಹಾಗೂ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೇ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ಪತ್ನಿ ನಾಗರತ್ನಾ ಮನವಿ ಸಲ್ಲಿಸಿದ್ದಾರಂತೆ.

ನಾಗರತ್ನ ಅವರ ಮನವಿಯಂತೆ ಮಹಿಳಾ ಆಯೋಗವು ವಿಜಯ್‌ಗೆ ನೋಟಿಸ್‌ ನೀಡಿದೆ. ನೋಟಿಸ್‌ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್‌, ಸದ್ಯದಲ್ಲೇ ಮಹಿಳಾ ಆಯೋಗಕ್ಕೆ ಭೇಟಿ ನೀಡಿ ಉತ್ತರಿಸುತ್ತೇನೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top