ಮನೋರಂಜನೆ

ಕೆ.ಜಿ.ಎಫ್‌ಗೆ ಸಿಕ್ಕಿತು ಯು/ಎ ಸರ್ಟಿಫಿಕೇಟ್‌

ಕರ್ನಾಟಕದ ಹೆಮ್ಮೆಯ ಚಿತ್ರವಾದ ಕೆಜಿಎಫ್ ಸಿನಿಮಾ ಇದೆ ತಿಂಗಳ 21 ನೇ ತಾರೀಕಿನಂದು ತೆರೆಗೆ ಆಪ್ಪಳಿಸುತ್ತಲಿದ್ದು , ಸಿನಿ ಪ್ರೇಕ್ಷಕರ ಕುತೂಹಲವನು ಕೆರಳಿಸಿದೆ. ರಾಕಿಂಗ್ ಸ್ಟಾರ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಅಣಿಯಾಗಿದ್ದು, ಈಗಾಗಲೇ ಸಲಾಂ ರಾಖಿ ಬಯ್ಯ ಸಾಂಗ್ ನಿಂದ , ಮತ್ತು ಎರೆಡೆರೆಡು ಟ್ರೈಲರ್ ಗಳಿಂದ ಸಿನಿ ಪ್ರಿಯರ ಮನಸೂರೆಗೊಂಡಿದೆ. ಇನ್ನೂ ಚಿತ್ರ ತೆರೆಕಂಡ ನಂತರ ಯಾವ ರೀತಿ ಧೂಳೆಬ್ಬಿಸಲಿದೆಯೋ ಕಾದು ನೋಡಬೇಕಿದೆ.

ಜಗತಿನಾದ್ಯಂತ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್‌ ಯಶ್‌ ಅಭಿನಯದ ಬಹುಭಾಷೆಯ ಕೆ.ಜಿ.ಎಫ್‌ ಸಿನಿಮಾಗೆ ಈಗ ಒಂದು ಖುಷಿಯಾದ ವಿಚಾರ ಸಿಕ್ಕಿದ್ದು, ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್‌ ಸಿಕ್ಕಿದೆ. ಕೆ.ಜಿ.ಎಫ್‌ ಸಿನಿಮಾವನ್ನ ನೋಡಿ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಆ ಮೂಲಕ ಕೆ.ಜಿ.ಎಫ್‌ ಸಿನಿಮಾವನ್ನ ಮಕ್ಕಳಿಂದ ಮುದುಕರವರೆಗೂ ಎಲ್ಲಾ ವರ್ಗದವರು ನೋಡಬಹುದು ಅಂತ ಸೆನ್ಸಾರ್‌ ಬೋರ್ಡ್‌ ಹೇಳಿದೆ.

ಚಿತ್ರ ಬಿಡುಗಡೆಯಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಇಡೀ ಚಿತ್ರೋದ್ಯಮವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ ಕೆಜಿಎಫ್ ಸಿನಿಮಾ. ಏನೇ ಹೇಳಿ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್ ನ ಕೆಜಿಎಫ್ ಟೀಮ್ ಗೆ ನಾವೆಲ್ಲರೂ ಹಾಟ್ಸ್ ಆಫ್ ಹೇಳಲೇ ಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top