ಹೆಚ್ಚಿನ

ಸರಿಗಮಪದ ಖ್ಯಾತ ಗಾಯಕ ಋತ್ವಿಕ್ ನ ಅಂಧ ಬದುಕಿಗೆ ಬೆಳಕಾಗಿ ಬಂದ 74 ವರ್ಷದ ವೃದ್ಧ

ಕನ್ನಡ ಭಾಷೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸ ರಿ ಗ ಮ ಪ ಕಾರ್ಯಕ್ರಮ ಎಲ್ಲರ ಮೆಚ್ಚಿನ ಫೇವರಿಟ್ ಸಿಂಗಿಂಗ್ ಶೋ. ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಶೋ ಪ್ರತಿ ವರ್ಷವು ಪ್ರೇಕ್ಷಕರ ಮುಂದೆ ಸೀಸನ್ ಗಳ ರೂಪದಲ್ಲಿ ಬರುತ್ತದೆ. ಪ್ರಸ್ತುತ 15 ನೇ ಸೀಸನ್ ಚಾಲ್ತಿಯಲ್ಲಿದ್ದು.ಈ ಸಾರಿ ಬಲಾಢ್ಯ ಗಾಯಕರೇ ಇರುವುದು ವಿಶೇಷ. ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡಬಲ್ಲ ಸಾಮರ್ಥ್ಯ ಉಳ್ಳ ಈ ಗಾಯಕರು ಈಗಾಗಲೇ ಕೋಟ್ಯಂತರ ಕನ್ನಡಿಗರ ಮನಸ್ಸನ್ನು ಗೆದ್ದಿದಾರೆ ಎಂದರೆ ತಪ್ಪಾಗಲಾರದು.

ಮುಖ್ಯವಾಗಿ ಸ ರಿ ಗ ಮ ಪ ಕಾರ್ಯಕ್ರಮ ದಲ್ಲಿ ಭಾಗವಹಿಸಿರುವ ಋತ್ವಿಕ್, ದೃಷ್ಟಿ ಹೀನನಾಗಿದ್ದರು ಸಹ ಅದ್ಭುತಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿ ಸ್ಪರ್ಧಿಗೂ ಒಳ್ಳೆಯ ಕಾಂಪಿಟಿಶನ್ ಕೊಡುತ್ತಿದ್ದಾರೆ.

ಹೌದು, ತಮ್ಮ ಅಮೂಲ್ಯ ಕಂಠ ಸಿರಿಯಿಂದಲೇ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಂಡಿರುವ ಋತ್ವಿಕ್ ರವರು ಒನ್ ಆಫ್ ದಿ ಬೆಸ್ಟ್ ಸಿಂಗರ್ ಆಫ್ ಸ ರಿ ಗ ಮ ಪ ಶೋ ಎಂಬ ಖ್ಯಾತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವಿಶೇಷ ಏನೆಂದರೆ  ಋತ್ವಿಕ್ ರವರ ಗಾನ ಮಾಧುರ್ಯಕ್ಕೆ ಮಾರು ಹೋಗಿರುವ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 74 ವರ್ಷದ ವೃದ್ಧ ಸಿದ್ದಲಿಂಗನಗೌಡ ಎಂಬ ಅಜ್ಜ ಈತನಿಗೆ ತನ್ನ ನೇತ್ರದಾನ ಮಾಡಲು ಮುಂದಾಗಿದ್ದಾರೆ. ಹೌದು ಈ ಅಜ್ಜ “ಸಾಯುವ ಮುನ್ನ ಶ್ರೇಷ್ಠವಾದ ಕೆಲಸ ಮಾಡು ಎಂದು ನಮ್ಮ ಅಪ್ಪ ಹೇಳಿದ್ದಾರೆ. ಅದರಂತೆ ನಾನು ಅಂಧ ಹಾಡುಗಾರ ಋತ್ವಿಕ್ ಗೆ ಕಣ್ಣುದಾನ ಮಾಡಲು ಸಿದ್ಧನಾಗಿದ್ದೇನೆ. ಒಂದು ತಿಂಗಳ ಹಿಂದೆ ನನ್ನ ದೇಹ, ಕಣ್ಣುಗಳನ್ನ ಬಳ್ಳಾರಿ ಸರ್ಕರಿ ಆಸ್ಪತ್ರೆಗೆ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್‍ಗೆ ಅಳವಡಿಸಿ ” ಎಂದು ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇಂತಹ ಒಂದು ಅರ್ಥಪೂರ್ಣ ನಿರ್ಧಾರ ಕೈಗೊಂಡ 74 ವರ್ಷದ ವೃದ್ಧ ಸಿದ್ದಲಿಂಗನಗೌಡ ರವರಿಗೆ ನಾವೆಲ್ಲರೂ ಹಾಟ್ಸ್ ಆಫ್ ಹೇಳಲೇ ಬೇಕು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top