fbpx
ರಾಜಕೀಯ

ಮದ್ಯಪಾನ ನಿಷೇಧ ಮಾಡಲು ಮುಂದಾಗಿದೆಯೇ ರಾಜ್ಯ ಸರ್ಕಾರ ? – ಬಿಜೆಪಿ ಶಾಸನಕನ ಈ ಪ್ರಶ್ನೆಗೆ ಸಿಎಂ ಏನು ಉತ್ತರ ಕೊಟ್ಟರು ಗೊತ್ತೇ?

ಬೆಳಗಾವಿಯ ವಿಧಾನಸಭೆ ಅಧಿವೇಶನ ದಲ್ಲಿ ಬಿಜೆಪಿ ಶಾಸಕ ಅಪ್ಪಚ್ವುರಂಜನ್ ಸಿಎಂ ಕುಮಾರಸ್ವಾಮಿಯವರನ್ನು ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೆ ತರಲಾಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಈ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಈಗ ನಿಮ್ಮ ಪ್ರಶ್ನೆಗೆ ಉತ್ತರಿಸಲಾಗದು, ಇದಕ್ಕೆ ನೀವು ಮೊದಲೇ ನೋಟಿಸ್ ನೀಡಬೇಕಾಗಿತ್ತು ಎಂದು ತಿಳಿಸಿದರು.

ಬಿಜೆಪಿ ಶಾಸಕ ಅಪ್ಪಚ್ವುರಂಜನ್ ಕೇಳಿದ ಈ ಪ್ರಶ್ನೆಗೆ ಕಾಲೆಳೆದ ಸ್ಪೀಕರ್ ರಮೇಶ್‌ ಕುಮಾರ್ ನಿಮ್ಮ ಈ ಪ್ರಶ್ನೆಗೆ ಸಂಜೆ ಪ್ರತ್ಯೇಕವಾಗಿ ಬಂದರೆ ಉತ್ತರ ಒದಗಿಸಲಾಗುವುದು ಎಂದು ನಗೆ ಚಟಾಕಿ ಹಾರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಲಿಕ್ಕರ್ ಬ್ಯಾನ್ ಮಾಡಿದ್ರೆ ಅಪ್ಪಚ್ಚು ರಂಜನ್ ಗೆ ಕೊಡಗಿನಲ್ಲಿ ಹೆಚ್ಚು ತೊಂದರೆಯಾಗುತ್ತದೆ ಎಂದು ಹೇಳಿದಾಗ ಇಡೀ ಸದನವೇ ಗೊಳ್ಳೆಂದು ನಕ್ಕಿತು.

ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ರಾಜ್ಯದ ವಿವಿಧ ಸಮಸ್ಯೆಗಳ ಕುರಿತಾದ ವಿವರಣಾತ್ಮಕ ಚರ್ಚೆ ನಡೆಯುತ್ತಿದೆ.

ಒಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಲಾಟರಿ ನಂತರ ಮದ್ಯಪಾನ ನಿಷೇಧ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆ ಎದ್ದಿದ್ದು. ಮುಂದಿನ ದಿನಗಲ್ಲಿ ಉತ್ತರ ಸಿಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top