fbpx
ಹೆಚ್ಚಿನ

1879 ರಲ್ಲಿ ಕನ್ನಡ ಕಲಿತು ಕನ್ನಡದಲ್ಲೆ ತೀರ್ಪು ಬರೆದಿದ್ದ ಬ್ರಿಟೀಷ್ ನ್ಯಾಯಾಧೀಶ ಯಾರು ಗೊತ್ತಾ?

ಇತೀಚೆಗಷ್ಟೇ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ಹಾಗೂ ಸಿಜೆಎಂ ಗೌರವಾನ್ವಿತ ನ್ಯಾಯಾಧೀಶರಾದ ಹೆಚ್.ಎಂ. ವಿರೂಪಾಕ್ಷಯ್ಯ ಹಿರೇಮಠ್​ರವರು ಒಂದೇ ದಿನದಲ್ಲಿ ರಾಜೀ ಸಂಧಾನದ ಪ್ರಕರಣಗಳು ಸೇರಿ 81 ವಿವಿಧ ಪ್ರಕರಣಗಳನ್ನು ಹಾಗೂ ಕಳೆದ ನವೆಂಬರ್ ತಿಂಗಳ ಕೋಟಾದಡಿಯಲ್ಲಿ 254 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ನ್ಯಾಯಾಂಗ ಇಲಾಖೆಯಲ್ಲಿ ಉನ್ನತ ಸಾಧನೆ ಗೈದಿದ್ದು ಮನೆಮಾತಾಗಿದೆ. ಅದಲ್ಲದೆ, ಇವರು ದಾಂಡೇಲಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ 280ಕ್ಕೂ ಹೆಚ್ಚು ಪ್ರಕರಣಗಳಿಗೆ ಕನ್ನಡದಲ್ಲೇ ಇವರು ತೀರ್ಪು ನೀಡಿರುವುದು ಹೊಸ ದಾಖಲೆಯನ್ನೇ ಬರೆದಿದ್ದು, ಕನ್ನಡದಲ್ಲಿ ತೀರ್ಪು ಪ್ರಕಟಿಸಿದ್ದ ಏಕೈಕ ನ್ಯಾಯಾಧೀಶರೆಂಬ ಹೆಗ್ಗಳಿಕೆಯೂ ಇವರ ಸಾಧನೆಯ ಖಾತೆಯಲ್ಲಿ ಜಮಾವಣೆಗೊಂಡಿದ್ದು ಪ್ರತಿಯೊಬ್ಬ ಕನ್ನಡಿಗನಿಗೂ ಈ ವಿಷಯ ಖುಷಿ ತಂದಿದೆ. ಹಾಗಾಗಿ ನ್ಯಾಯಾಧೀಶರು ಕನ್ನಡದ ಮೇಲಿಟ್ಟಿರುವ ಆಪಾರ ಗೌರವಕ್ಕೆ ಜನರು ತಲೆದೂಗಿದ್ದಾರೆ.

ಹೀಗಿರುವಾಗ ಇನ್ನೊಂದು ವಿಚಾರ ಬೆಳೆಕಿಗೆ ಬಂದಿದ್ದು. 1879 ರಲ್ಲಿ ಒಬ್ಬ ಬ್ರಿಟಿಷ್ ನ್ಯಾಯಾಧೀಶ ಕನ್ನಡ ಕಲಿತು ಕನ್ನಡದ್ಲಲೇ ತೀರ್ಪು ನೀಡಿದ್ದರಂತೆ. ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಪೂರಾವೆಯು ಸಿಕ್ಕಿದ್ದು , ಕನ್ನಡಿಗರಿಗೆ ಈ ವಿಚಾರ ಹೆಮ್ಮೆ ತಂದಿದೆ ಹಾಗೂ ಆ ಬ್ರಿಟಿಷ್ ನ್ಯಾಯಾಧೀಶನ ಮೇಲೆ ಗೌರವ ಭಾವನೆ ಮೂಡಿದೆ. ಹಾಗಾದರೆ ಆ ಜಡ್ಜ್ ಯಾರು ಅಂತೀರಾ? ಹೌದು, ಕನ್ನಡ ಕಲಿತು ಕನ್ನಡಲ್ಲೇ ತೀರ್ಪು ನೀಡಿದ ಬ್ರಿಟಿಷ್ ಜಡ್ಜ್ ಯಾರೆಂದರೆ ಅವರೇ ‘ಲಾರೆನ್ಸ್’. ಹೀಗೀಗಾ ಅವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಹರಿದು ಬರುತ್ತಿದ್ದು. ಲಾರೆನ್ಸ್ ಕನ್ನಡ ಪ್ರೇಮವನ್ನು ಜನರು ಕೊಂಡಾಡಿದ್ದಾರೆ.

ಇಲ್ಲಿದೆ ನೋಡಿ ಲಾರೆನ್ಸ್ ರವರು ಕನ್ನಡಲ್ಲಿ ಬರೆದ ತೀರ್ಪು :

 

 

ಒಟ್ಟಿನಲ್ಲಿ ಕನ್ನಡದಲ್ಲಿ ತೀರ್ಪು ಪ್ರಕಟಿಸಿದ್ದ ಏಕೈಕ ನ್ಯಾಯಾಧೀಶರೆಂಬ ಹೆಗ್ಗಳಿಕೆಯನ್ನು ಗೌರವಾನ್ವಿತ ನ್ಯಾಯಾಧೀಶರಾದ ಹೆಚ್.ಎಂ. ವಿರೂಪಾಕ್ಷಯ್ಯ ಹಿರೇಮಠ್​ರವರು ಮುಡಿಗೇರಿಸ್ಕೊಂಡಿದ್ದು. ಕನ್ನಡ ಕಲಿತು ಕನ್ನಡದ್ಲಲೇ ತೀರ್ಪು ನೀಡಿದ ಮೊದಲ ಜಡ್ಜ್ ಎಂಬ ಪಟ್ಟವನ್ನು ಲಾರೆನ್ಸ್ ಅಲಂಕರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top