fbpx
ರಾಜಕೀಯ

ಪ್ರಧಾನಿ ಮೋದಿ ಮಾಡಿದ್ದ ಹಳೇ ಟ್ವೀಟ್ ಅನ್ನೇ ಬಳಸಿ ಬಿಜೆಪಿಯನ್ನು ಕುಟಿಕಿದ ರಮ್ಯಾ.

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು. ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಬಿಜೆಪಿಯನ್ನು ಸೋಲಿಸಿದ ಖುಷಿಯನ್ನು ಆಚರಿಸುತ್ತಿರುವ ಕಾಂಗ್ರೆಸ್ಸಿಗರು ಬಿಜೆಪಿ ಯ ವಿರುದ್ಧ ಸಾಲು-ಸಾಲು ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸಂಸದೆ, ನಟಿ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಟ್ವೀಟ್ ಅನ್ನೇ ಬಳಸಿಕೊಂಡು ಬಿಜೆಪಿಯ ಕಾಲನ್ನು ಎಳೆದಿದ್ದಾರೆ.

2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಬಿಜೆಪಿ ಸಾಧಿಸಿತ್ತು. ಪಂಜಾಬ್ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತ್ತು .ಹೀಗಿದ್ದಾಗ ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ತಮ್ಮ ಟ್ವೀಟರ್ ನಲ್ಲಿ “ಕಾಂಗ್ರೆಸ್ ಮುಕ್ತ ಭಾರತ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನೇ ಬಳಸಿ ರಮ್ಯಾ ನೇರವಾಗಿ ಬಿಜೆಪಿ ಮುಕ್ತ ಭಾರತ ಎಂದು ಟ್ವೀಟಿಸಿ ನಗುವಿನ ಕೇಕೆ ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top