fbpx
ಸಮಾಚಾರ

ಪಂಚರಾಜ್ಯ ಚುನಾವಣೆಯ ಫಲಿತಾಂಶ- ವಿಧೇಯತೆಯಿಂದ ಸೋಲು ಸ್ವೀಕರಿಸಿದ ಪ್ರಧಾನಿ ಮೋದಿ.

ಐದು ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ(BJP) ಸೋಲಿನ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಜನರ ತೀರ್ಪನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಫಲಿತಾಂಶ ಪ್ರಕಟಣೆಯ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

 

 

 

ಮಂಗಳವಾರದಂದು ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಗೆ ಅನಿರೀಕ್ಷಿತ ಸೋಲನ್ನೆದುರಿಸಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷಕ್ಕಾದ ಈ ಸೋಲನ್ನು ಅತ್ಯಂತ ವಿದೇಯತೆಯಿಂದ ಸ್ವೀಕರಿಸಿದ್ದಾರೆ. “ಬಿಜೆಪಿ ಕಾರ್ಯಕರ್ತರ ಕುಟುಂಬ ಹಗಲು, ರಾತ್ರಿ ಎನ್ನದೆ ವಿಧಾನಸಭೆ ಚುನಾವಣೆಗಾಗಿ ಶ್ರಮಿಸಿದೆ. ಅವರಿಗೆ ನನ್ನ ಕೃತಜ್ಞತೆಗಳು. ಸೋಲು ಮತ್ತು ಗೆಲುವು ಬದಕಿನ ಅವಿಭಾಜ್ಯ ಅಂಗ. ಈ ದಿನದ ಫಲಿತಾಂಶ ನಾವು ಜನಸೇವೆಯಲ್ಲಿ ಮತ್ತಷ್ಟು ತೊಡಗಲು ಮತ್ತು ಭಾರತದ ಅಭಿವೃದ್ಧಿಗೆ ಮತ್ತಷ್ಟು ಒತ್ತುಕೊಡಲು ಪ್ರೇರೇಪಿಸಲಿದೆ” ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಬಿಜೆಪಿ ಸೋಲನ್ನು ಸ್ವೀಕರಿಸಿದ್ದಾರೆ.

ತಮ್ಮ ಎರಡನೇ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ತೆಲಂಗಾನದಲ್ಲಿ ಜಯಗಳಿಸಿದ ಕೆಸಿಆರ್‌ಗೆ ಅಭಿನಂದಿಸಿರುವ ಮೋದಿ ‘ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅಭಿನಂದನೆಗಳು. ತೆಲಂಗಾಣದಲ್ಲಿ ಅದ್ಭುತ ಜಯಗಳಿಸಿದ ಕೆಸಿಆರ್‌ಗಾರು ಹಾಗೂ ಮಿಜೋರಾಂನಲ್ಲಿ ಆಕರ್ಷಕ ಜಯ ಗಳಿಸಿದ ಮಿಜೋ ನ್ಯಾಷನಲ್ ಫ್ರಂಟ್‌ಗೂ ಶುಭಾಷಯಗಳು ಎಂದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top