fbpx
ರಾಜಕೀಯ

ಮಧ್ಯಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲು – ಇನ್ನಾದರೂ ಹೂವಿನ ಮಾಲೆ ಧರಿಸುವರೇ ಕಾಂಗ್ರೆಸ್ ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ?

ದೇಶದ ಹೃದಯ ಭಾಗ ಎನಿಸಿಕೊಂಡಿರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಳ ಬಹುಮತ ಗಳಿಸುವುದು ಸ್ಪಷ್ಟವಾಗುತ್ತಿದ್ದಂತೆ ರಾಜ್ಯದ ಪ್ರಭಾವಿ ನಾಯಕರಾದ ಕಮಲ್ ನಾಥ್ ,ದಿಗ್ವಿಜಯ್​ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡುತ್ತಿವೆ. ಕಮಲ್ ನಾಥ್ ಕಾಂಗ್ರೆಸ್ ಹಿರಿಯ ಮುಖಂಡ ಆಗಿದ್ದರೆ ಸಿಂಧಿಯಾ ಅವರು ರಾಹುಲ್ ಗಾಂಧಿಯ ಯುವ ಗುಂಪಿನ ಪ್ರಭಾವಿ ನಾಯಕರಾಗಿದ್ದಾರೆ ಹಾಗೂ ದಿಗ್ವಿಜಯ್​ ಸಿಂಗ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಹೀಗಿರುವಾಗ ಈ ಹಿಂದೆ ನಡೆದ ಒಂದು ಘಟನೆ ಎಲ್ಲರಿಗು ಜ್ಞಾಪಕಕ್ಕೆ ಬಂದಿದ್ದು. ಕಳೆದ ವರ್ಷ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಅಧಿಕಾರದಿಂದ ಹೊರಗುಳಿಯುವವರೆಗೂ ಕಾಂಗ್ರೆಸ್ ಮುಖಂಡನಾದ ನಾನು ಯಾವುದೇ ಹೂವಿನ ಹಾರವನ್ನು ಧರಿಸುವುದಿಲ್ಲ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಜ್ಞೆ ಮಾಡಿದ್ದರು. ಇದೀಗ ಅವರು ಅಂದುಕೊಂಡಂತೆ ಆಗಿದ್ದು, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವ ಸೋತಿದೆ. ಹೀಗಾಗಿ ಅಲ್ಲಿನ ಜನರು ಈ ಬಾರಿ ಜ್ಯೋತಿರಾದಿತ್ಯ ಸಿಂಧಿಯಾ ಹೂವಿನ ಹಾರ ಧರಿಸಲಿದ್ದಾರೆಯೇ ಎಂಬ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಒಟ್ಟಿನಲ್ಲಿ ಅವರು ಪ್ರತಿಜ್ಞೆಯಂತೆ ಒಂದು ವರ್ಷದಿಂದ ಯಾವುದೇ ಹೂವಿನ ಹಾರವ ಧರಿಸದೇ ಇದಿದ್ದು, ಈಗ ಅವರು ಅಂದುಕೊಂಡಂತೆ ಹಾಗಿರುವುದರಿಂದ ಜ್ಯೋತಿರಾದಿತ್ಯ ಸಿಂಧಿಯಾ ಸಿಎಂ ಪಟ್ಟಕ್ಕೆ ಏರಿ ಹೂವಿನ ಮಾಲೆ ಧರಿಸಲಿದ್ದಾರೆ ಎಂಬ ಮಾತುಗಳು ಮಧ್ಯಪ್ರದೇಶದಲ್ಲಿ ಕೇಳಿ ಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top