fbpx
ಸಮಾಚಾರ

ಪತ್ನಿಯರಿಂದ ಮತ್ತೆ ಸಂಕಷ್ಟಕ್ಕೆ ತುತ್ತುಗಲಿದ್ದಾರೆಯೇ ದುನಿಯಾ ವಿಜಯ್?

ದುನಿಯಾ ವಿಜಯ್ ಕುಟುಂಬದ ಸಮಸ್ಯೆ ಇನ್ನೂ ತಣ್ಣಗಾಯಿತು ಅಂದುಕೊಳ್ಳುತ್ತಿರುವಾಗಲೇ ದುನಿಯಾ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ದುನಿಯಾ ವಿಜಯ್ ಮೊದಲ ಹೆಂಡತಿ ನಾಗರತ್ನ ಇತ್ತೀಚಿಗಷ್ಟೇ ತನ್ನ ಮೇಲಿನ ಕೇಸ್​ ವಾಪಸ್​ ಪಡೆಯುವಂತೆ ಮಹಿಳಾ ಆಯೋಗಕ್ಕೆ ಕೋರಿದ್ದರು. ಈಗ ಇದೆ ಹಾದಿಯನ್ನು ತುಳಿದಿರುವ ದುನಿಯಾ ವಿಜಯ್ ರವರ ಎರಡನೇ ಹೆಂಡತಿ ಕೀರ್ತಿ ಸಹ ಮಹಿಳಾ ಆಯೋಗದ ಮೆಟ್ಟಿಲೇರಿ ತನಗೆ ಭದ್ರತೆ ನೀಡಿ ನನ್ನ ಮೇಲೆ‌ ಒಮ್ಮೆ ಹಲ್ಲೆ ಆಗಿದೆ ಹೀಗಾಗಿ ಇನ್ನೊಮ್ಮೆ ಹಲ್ಲೆ ಆಗಬಹುದು ಆದ್ದರಿಂದ ನನಗೂ ರಕ್ಷಣೆ ಒದಗಿಸಿ ಎಂದು ಕೇಳಿಕೊಂಡಿದ್ದಾರೆ.

ಆದರೆ ಮಹಿಳಾ ಆಯೋಗಕ್ಕೆ ತನ್ನ ಮೇಲಿರುವ ಕೇಸ್ ಅನ್ನು ವಾಪಾಸ್ ತೆಗೆದುಕೊಂಡು ತನ್ನ ಸಂಸಾರ ಉಳಿಸಿ ಎಂದು ಬೇಡಿಕೊಂಡಿರುವ ನಾಗರತ್ನ ರ ಕೇಸಿನ ಬಗ್ಗೆ ಮಹಿಳಾ ಆಯೋಗ ಯಾವ ನಿರ್ಧಾರ ಕೈ ಗೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ. ಇಲಾಖೆ ತೆಗೆದುಕೊಂಡ ನಿರ್ಧಾರ ಅಥವಾ ಪ್ರಕರಣವನ್ನ ಆಯೋಗ ವಾಪಸ್ ತೆಗೆದುಕೊಳ್ಳುವಂತೆ ತಿಳಿಸಿಬಹುದೇ? ಎಂಬುದರ ವಿಚಾರದ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದು.ಒಂದು ವೇಳೆ ಆ ಹಕ್ಕು ಇದ್ದಿದ್ದೇ ಆದಲ್ಲಿ ನಾಗರತ್ನ ಮೇಲಿನ ಕೇಸು ವಾಪಾಸ್ ತೆಗೆದುಕೊಳ್ಳುವಂತೆ ಸೂಚಿಸಲು ಆಯೋಗ ಮುಂದಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಮತ್ತೆ ಮತ್ತೆ ದುನಿಯಾ ವಿಜಯ್ ಕುಟುಂಬದ ಕೇಸ್ ತಿರುವು ಪಡೆದುಕೊಳ್ಳುತ್ತಿದ್ದು,ಇವೆಲ್ಲದರಿಂದ ದುನಿಯಾ ವಿಜಯ್ ರವರಿಗೆ ಸಂಕಷ್ಟಗಳ ಸರಮಾಲೆ ಎದುರಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top