fbpx
ರಾಜಕೀಯ

ಡಿ.22 ರಂದು ಸಂಪುಟ ಪುನಾರಚನೆ : ಯಾರು ಕಳೆದುಕೊಳ್ಳುವರು ಮಂತ್ರಿಸ್ಥಾನ ?

ಡಿ. 22 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಸರ್ಕಾರ ಘೋಷಿದ ಬೆನ್ನಲ್ಲೇ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ, ಕೆಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವುದು ಕಾಂಗ್ರೆಸ್​ಗೆ ಅನಿವಾರ್ಯವಾಗಿದೆ. ಸದ್ಯಕ್ಕೆ ಇಬ್ಬರು ಸಚಿವರನ್ನು ಕಾಂಗ್ರೆಸ್ ಶಾರ್ಟ್​ಲಿಸ್ಟ್ ಮಾಡಿದೆ ಎಂಬ ಸುದ್ದಿ ಕೇಳಿ ಬರುತ್ತಿದ್ದು .ಪಕ್ಷೇತರ ಶಾಸಕ ಹಾಗೂ ಅರಣ್ಯ ಸಚಿವ ಆರ್. ಶಂಕರ್​ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ ಅವರನ್ನು ಕೈ ಬಿಟ್ಟು ಬೇರೆ ಸಚಿವರಿಗೆ ಅವಕಾಶ ಕಲ್ಪಿಸುವುದರ ಕುರಿತು ಕೈ ಬಳಗ ಚರ್ಚಿಸುತ್ತಿದೆ ಎನ್ನಲಾಗಿದೆ.

ಜಯಮಾಲ ಮೊದಲ ಬಾರಿಗೆ ಎಂಎಲ್ಸಿ ಆಗಿದ್ದರೂ ಸಹ ಇಲ್ಲಿಯವರೆಗೆ ಅವರಿಂದ ಪಕ್ಷಕ್ಕೆ ಯಾವುದೇ ರೀತಿಯ ಕೊಡುಗೆ ಸಿಕ್ಕಿಲ್ಲವಾದ್ದರಿಂದ ಜಯಮಾಲ ಬದಲು ಮಹಿಳಾ ಶಾಸಕಿಯೊಬ್ಬರಿಗೆ ಅವಕಾಶ ನೀಡುವುದರ ಬಗ್ಗೆ ಕೈ ನಾಯಕರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ .ಇನ್ನೂ ಜಯಮಾಲ ಅವರನ್ನು ಕೈಬಿಟ್ಟರೆ ಆ ಸ್ಥಾನಕ್ಕೆ ದಲಿತ ಎಡಗೈ ಕೋಟಾದಡಿ ರೂಪಾ ಶಶಿಧರ್​ ಅಥವಾ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್​ ಅವರಿಗೆ ನೀಡಲಾಗುತ್ತದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು ದೃಢ ನಿರ್ಧಾರ ತೆಗೆದುಕೊಂಡ ಮೇಲೆ ತಿಳಿಸುತ್ತೇವೆಂದು ಕೈ ಪಾಳಿಯ ಹೇಳಿದೆ.

ಇನ್ನೂ ಈ ಬಗ್ಗೆ ಮಾತನಾಡಿರುವ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೂ ಸಹ ಅಲ್ಪ ಸಂಖ್ಯಾತರಿಗೆ 2 ಸ್ಥಾನ ನೀಡಬೇಕು ಎಂದು ಖಾನ್ ಒತ್ತಾಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top