fbpx
ರಾಜಕೀಯ

ಪಂಚ ರಾಜ್ಯಗಳ ಸೋಲಿನಿಂದ ಎಚ್ಚೆತ್ತು ಕೊಂಡ ಮೋದಿ ಸರ್ಕಾರ ಸಾಲಮನ್ನಾ ಮಾಡಲು ಮುಂದಾಯಿತಾ ?

ಪಂಚ-ರಾಜ್ಯಗಳ ವಿಧಾನ ಸಭಾ ಚುನಾಣೆಯಲ್ಲಿ ಹಿನ್ನಡೆ ಅನುಭವಿಸಿರುವ ಬಿಜೆಪಿ 2019 ರಲ್ಲಿ ಬರುವ ಲೋಕಸಭಾ ಚುನಾವಣೆಗೆ ಈಗಾಗಲೇ ಎಚ್ಚೆತ್ತು ಕೊಂಡಿದ್ದು. ಪಂಚ ರಾಜ್ಯಗಲ್ಲಿ ಸೋತಿದ್ದಕ್ಕೆ ಪಾಠ ಕಲಿತಂತಿದೆ. ಹಾಗೂ ಪಂಚ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮುಖ್ಯ ಕಾರಣ ರೈತರ ಅಸಮಾಧಾನ ಎಂದು ತಿಳಿದುಬಂದಿದ್ದು. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೆ ಅವರ ಗೆಲುವಿನ ನಗೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ.

ಬಿಜೆಪಿ ಸೋಲಲು ಮುಖ್ಯ ಕಾರಣ ರೈತರ ಅಸಮಾಧಾನ ಎಂದು ಅರಿತ ಮೋದಿ ಸರ್ಕಾರ , ಇದೀಗ ಒಂದು ದೊಡ್ಡ ಪ್ಲಾನ್ ಮಾಡಿದ್ದು. ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ .ಇದಕ್ಕೆ ತಕ್ಕ ಸಿದ್ಧತೆಗಳು ನಡೆಯುತ್ತಿದ್ದು ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳಲಿದೆಯಂತೆ.

ಆದರೆ ಪಂಚ ರಾಜ್ಯಗಳಲ್ಲಿ ಬಿಜೆಪಿ ಸೋತ ನಂತರ , ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ರೀತಿ ಸಾಲ ಮನ್ನಾ ದ ಯೋಜನೆಯನ್ನು ತರಲು ಮುಂದಾಗಿದೆ ಎಂಬ ಮಾತುಗಳು ಕಾಂಗ್ರೆಸ್‌ ಪಾಳೆಯದಲ್ಲಿ ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top