fbpx
ಭವಿಷ್ಯ

14 ಡಿಸೆಂಬರ್: ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶುಕ್ರವಾರ, ಡಿಸೆಂಬರ್ ೧೪, ೨೦೧೮
ಸೂರ್ಯೋದಯ :೦೭:೦೬
ಸೂರ್ಯಾಸ್ತ : ೧೭:೫೯

ಪಕ್ಷ : ಶುಕ್ಲ ಪಕ್ಷ
ತಿಥಿ : ಸಪ್ತಮೀ – ೨೮:೧೫+ ವರೆಗೆ
ನಕ್ಷತ್ರ : ಶತಭಿಷ – ೨೨:೪೩ ವರೆಗೆ
ಯೋಗ : ವಜ್ರ – ೨೫:೨೬+ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ :೧೨:೧೧ – ೧೨:೫೪
ಅಮೃತಕಾಲ : ೧೪:೩೮ – ೧೬:೨೫
ರಾಹು ಕಾಲ: ೧೧:೧೨ – ೧೨:೩೩
ಗುಳಿಕ ಕಾಲ: ೦೮:೩೧ – ೦೯:೫೧
ಯಮಗಂಡ:೧೫:೧೪ – ೧೬:೩೪

ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಯಾರದೋ ಪಿತೂರಿಯಿಂದಾಗಿ ಮೇಲಾಧಿಕಾರಿಗಳ ಕೋಪಕ್ಕೆ ಒಳಗಾಗಬೇಕಾಗುವುದು.

 

ಕೆಲಸದ ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಸ್ನೇಹಿತರ ಸಲಹೆಯಿಂದಾಗಿ ಆಗಲಿರುವ ವಂಚನೆಯಿಂದ ಪಾರಾಗುವಿರಿ.

 

ದುಡುಕುತನ ಬೇಡ. ಮಾನಸಿಕ ಏಕಾಗ್ರತೆಗಾಗಿ ಅಧ್ಯಯನ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕಬೇಡಿ

 

ನೀವು ಆಡಿದ ಮಾತುಗಳೆ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ. ಹಾಗಾಗಿ ಎಚ್ಚರಿಕೆಯಿಂದ ಮಾತನಾಡಿರಿ.  ಬಂಧುಗಳೊಂದಿಗೆ ಆದ ವೈಮನಸ್ಸು ನಿಮ್ಮನ್ನು ಒಂಟಿತನಕ್ಕೆ ಈಡು ಮಾಡುವುದು.

 

 

ಆಗಿಹೋದ ಕಹಿ ಘಟನೆಗಳ ನೆನಪಿನಿಂದ ನೋವು ಮರುಕಳಿಸುತ್ತದೆಯೇ ಹೊರತು ಅದರಿಂದ ಪ್ರಯೋಜನವಿಲ್ಲ. ಸಂಗಾತಿಯಿಂದ ಸಾಂತ್ವನದ ಮಾತನ್ನು ಕೇಳುವಿರಿ. ಯೋಗ್ಯರ ಸಲಹೆಯಿಂದ ಮಾತ್ರ ಸಮಸ್ಯೆ ದೂರವಾಗಲಿದೆ.

 

 

ಅತಿಯಾದ ಆತ್ಮ ಸಮರ್ಥನೆ ನಿಮ್ಮನ್ನು ಅಪಮಾನಗೊಳಿಸುವುದು. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಿರಿ. ಅವಸರ ಕೆಲಸ ಕೆಡಿಸಿದರೆ ಸಂಯಮ ಕಾರ್ಯ ಸಾಧಿಸುತ್ತದೆ. ಹಾಗಾಗಿ ಮಾಡುವ ಕಾರ್ಯದಲ್ಲಿ ಸಂಯಮ ಇರಲಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರುಹಿರಿಯರ ಆಶೀರ್ವಾದದಿಂದ ಯಶಸ್ವಿ ಆಗಲಿದೆ.

 

 

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಕೆಲವು ಘಟನೆಗಳು ನಿಮಗೆ ಕೋಪ ತರಿಸುವುದು. ಆದರೆ ಅದೇ ನಿಜವಾದ ಸತ್ಯವಲ್ಲ ಎಂಬ ಅರಿವು ನಿಮಗೆ ಆನಂತರ ತಿಳಿಯುವುದು. ತಾಳ್ಮೆಯಿಂದ ಇರಿ. ಪರರ ಅಭಿಪ್ರಾಯಗಳಿಗೂ ಬೆಲೆಕೊಟ್ಟು ಅವರು ಆಡುವ ಮಾತುಗಳ ನಿಜ ಅರ್ಥವನ್ನು ತಿಳಿಯಿರಿ. ದೈವಬಲ ಇರುವುದರಿಂದ ಆತ್ಮಶಕ್ತಿಯೂ ಊರ್ಜಿತಗೊಳ್ಳುವುದು.

 

 

ಹಳೆಯ ಮಿತ್ರರ ಸಹಕಾರದೊಂದಿಗೆ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಿರಿ. ಅನಾವಶ್ಯಕ ಚಿಂತನೆಯಿಂದ ರೋಗ ಉಲ್ಬಣಿಸುವ ಸಾಧ್ಯತೆ. ಪರರ ಸಮಸ್ಯೆಗಳ ಪರಿಪರಿಸಲು ಹೋಗಿ ನೀವೇ ಪರದಾಡಬೇಕಾಗುವುದು.

ಹಮ್ಮಿಕೊಂಡ ನೂತನ ಕಾರ್ಯಗಳು ಯಶಸ್ಸನ್ನು ತಂದುಕೊಡುವುದು. ಬಹುದಿನದ ನಿಮ್ಮ ಸಂಕಲ್ಪ ಈಡೇರಲಿದೆ. ವೈಯಕ್ತಿಕ ಜೀವನ ಸುಖಮಯವಾಗಲಿದೆ.

 

 

ಕೆಲವೊಮ್ಮೆ ನಿಮ್ಮ ನಿಸ್ವಾರ್ಥ ಸೇವೆ ಸಮಾಜದಲ್ಲಿ ನಗಣ್ಯವಾಗುವುದು. ಶತ್ರುಗಳ ಬಾಧೆ ಹೆಚ್ಚಾಗುವುದು,ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಕಳೆದುಕೊಂಡ ವಸ್ತುಗಳು ಶೀಘ್ರವೇ ದೊರೆಯುವ ಸಾಧ್ಯತೆ.

 

ಕಲ್ಪನಾ ಲೋಕದಲ್ಲಿ ವಿಹರಿಸುವಿರಿ. ಅವರೊಟ್ಟಿಗೆ ವಾಸ್ತವಿಕ ಕುಂದುಕೊರತೆಗಳ ಬಗ್ಗೆಯೂ ಚಿಂತಿಸುವುದು ಒಳಿತು. ಕೆಲವೊಮ್ಮೆ ನಿಮ್ಮ ಉದಾಸೀನ ಪ್ರವತ್ತಿ ನಿಮ್ಮ ಭವಿಷ್ಯವನ್ನು ಹಾಳು ಮಾಡುವ ಸಾಧ್ಯತೆ ಇರುವುದು.

 

ಅರಿತು ಬಾಳಿದರೆ ಆರು ವರುಷ, ಮರೆತು ಬಾಳಿದರೆ ಮೂರು ವರುಷ ಎನ್ನುವಂತೆ ಕೆಲವೊಂದು ವಿಚಾರಗಳನ್ನು ವಿಮರ್ಶಿಸಿ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಹಿರಿಯರ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top