ಮನೋರಂಜನೆ

ಬಿಗ್ ಬಾಸ್ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದು ಇವರೇ ಸ್ವಾಮಿ.

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 18 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಎಂಟನೇ ವಾರದ ಎಲಿಮಿನೇಷನ್ ಕೂಡ ನಡೆದಿದೆ.. ಬಿಗ್ ಬಾಸ್ ಮನೆಯಲ್ಲಿ ಸೇಫ್ ಗೇಮ್ ಆಡುವ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದ ನಯನ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾಳೆ..

 

 

ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಬರೋಬ್ಬರಿ 7 ಜನ ಸ್ಪರ್ದಿಗಳ ಪೈಕಿ ನಯನ ಅವ್ರು ವೀಕ್ಷಕರ ವೋಟಿಂಗ್ ಗಳಿಸುವಲ್ಲಿ ವಿಫಲರಾಗಿದ್ದಾರೆ.. ಮನೆಯಿಂದ ಹೊರಹೋಗಲು ರಾಕೇಶ್, ಅಕ್ಷತಾ, ಶಶಿ, ಕವಿತಾ, ಜಯಶ್ರೀ, ಧನರಾಜ್, ನಯನ ನಾಮಿನೇಟ್ ಆಗಿದ್ದರು.. ಉಳಿದ ಎಲ್ಲಾ ಸ್ಪರ್ಧಿಗಳು ಸೇಫ್ ಆಗಿದ್ದು ನಯನ ಮಾತ್ರ ಮನೆಯಿಂದ ಹೊರಬಂದಿದ್ದಾರೆ.

ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 1’ ರಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದ ನಯನ ಈ ಭಾರಿಯ ಬಿಗ್ ಬಾಸ್ ಗೆಲ್ಲುವ ಆಸೆಯನ್ನು ಕಳೆದುಕೊಂಡಿದ್ದಾರೆ. ಚಿಟ್ಟೆ ಹೆಜ್ಜೆ ಎನ್ನುವ ಧಾರಾವಾಹಿಯಲ್ಲೂ ಅಭಿನಯಿಸಿದ್ದ ನಯನ ಪವರ್, ಸಿದ್ಧಾರ್ಥ, ಅಲೆಮಾರಿ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top