ಹೆಚ್ಚಿನ

20 ಕೋಟಿಗೆ ಹರಾಜಾಯ್ತು ವಿಜ್ಞಾನಿ ಐನ್​ಸ್ಟೀನ್ ಬರೆದಿದ್ದ ಆ ಪತ್ರ – ಹಾಗಾದರೆ ಆ ಪತ್ರದಲ್ಲಿ ಅಂತಹದೇನಿತ್ತು ಗೊತ್ತಾ?

ನೊಬೆಲ್ ಪುರಸ್ಕೃತ ವಿಜ್ಞಾನಿ ಅಲ್ಬರ್ಟ್​ ಐನ್​ಸ್ಟೀನ್ ಅವರು 1954 ರಲ್ಲಿ ಜರ್ಮನಿಯ ತತ್ವಜ್ಞಾನಿ ಎರಿಕ್ ಗುಟ್ಕಿಂಡ್ ಅವರಿಗೆ ಐನ್​ಸ್ಟೀನ್ ದೇವರ ಅಸ್ತಿತ್ವ ಹಾಗೂ ಧರ್ಮದ ಕುರಿತು ಪತ್ರವನ್ನು ಬರೆದಿದ್ದರು. ಹಾಗೂ ಅಂದು
ಎರಿಕ್ ನೀಡಿದ ಚೂಸ್ ಲೈಫ್: ದಿ ಬೈಬ್ಲಿಕಲ್ ಕಾಲ್ ಟು ರಿವೋಲ್ಟ್’ ಎಂಬ ಪುಸ್ತಕಕ್ಕೆ ಪ್ರತಿಕ್ರಿಯಿಸಿ ಈ ಪತ್ರವನ್ನು ಕಳುಹಿಸಿದ್ದರು ಅಲ್ಬರ್ಟ್​ ಐನ್​ಸ್ಟೀನ್ ಎನ್ನಲಾಗಿದೆ.

ಇದೀಗ ಅಲ್ಬರ್ಟ್​ ಐನ್​ಸ್ಟೀನ್ ದೇವರ ಅಸ್ತಿತ್ವ ಹಾಗೂ ಧರ್ಮದ ಕುರಿತು ಬರೆದ ಈ ಪತ್ರವು ಬರೋಬ್ಭರಿ 2.89 ಮಿಲಿಯನ್ ಡಾಲರ್​ಗೆ ಹರಾಜಾಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 20 ಕೋಟಿ ರುಪಾಯಿಗೆ ಈ ಪತ್ರ ಹರಾಜಾಗಿದೆ ಎಂದು ಊಹಿಸಲಾಗಿದೆ.

ಅಲ್ಬರ್ಟ್​ ಐನ್​ಸ್ಟೀನ್ ದೇವರ ಅಸ್ತಿತ್ವ ಮತ್ತು ಧರ್ಮವನ್ನು ಪ್ರಶ್ನಿಸಿ ಬರೆಯಲಾದ ಈ ಪತ್ರವನ್ನು ‘ಗಾಡ್ ಲೆಟರ್’​ ಎಂದೇ ಕರೆಯಲಾಗುತ್ತದೆ

ಹಾಗೂ ಈ ಪತ್ರದಲ್ಲಿ ಐನ್​ಸ್ಟೀನ್ ದೇವರು ಎಂಬುದು ಕೇವಲ ಒಂದು ಪದವಾಗಿದ್ದು, ಇದು ಮಾನವರ ಬಲಹೀನತೆಯ ಫಲಿತಾಂಶವಾಗಿದೆ ಎಂದು ನಮೂನಿಸಿದ್ದಾರಂತೆ.

ಐನ್​ಸ್ಟೀನ್ ರ ಬರವಣಿಗೆಗಳು ಹರಾಜಾಗಿದ್ದು ಈ ಮೊದಲೇನಲ್ಲ. ಈ ಹಿಂದೆ ಐನ್​ಸ್ಟೀನ್ ಅವರು ವಿದ್ಯಾರ್ಥಿಗೆ ಬರೆದಿದ್ದ ಪತ್ರವೊಂದು ಸುಮಾರು 4 ಲಕ್ಷಕ್ಕೆ ಮಾರಾಟವಾಗಿತ್ತು. ಹಾಗೆಯೇ 1928ರಲ್ಲಿ ಥಿಯರಿ ಆಫ್​ ರಿಲೇಟಿವಿಟಿಯ ಕುರಿತು ಬರೆದ ಟಿಪ್ಪಣಿಯು ಸುಮಾರು 73 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು ಎಂದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top