fbpx
ಭವಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಿಗೆಲ್ಲಾ ದೀರ್ಘ ಆಯಸ್ಸು ಇರುತ್ತೆ ಹಾಗೂ ರವಿ ಮತ್ತು ಗುರು ಸೇರಿದರೆ ಏನು ಫಲ ಅಂತ ತಪ್ಪದೆ ತಿಳ್ಕೊಳ್ಳಿ ಒಳ್ಳೆಯದು

ಜ್ಯೋತಿಷ್ಯದ ಪ್ರಕಾರ ಯಾರಿಗೆಲ್ಲಾ ದೀರ್ಘ ಆಯಸ್ಸು ಇರುತ್ತದೆ. ರವಿ ಮತ್ತು ಗುರು ಸೇರಿದರೆ ಏನು ಫಲ .
ಸಾಮಾನ್ಯವಾಗಿ ಒಂದು ಜಾತಕವನ್ನು ನೋಡುವಾಗ ಮುಖ್ಯವಾಗಿ ತಿಳಿದುಕೊಳ್ಳಲು ಬಯಸುವ ವಿಚಾರವೆಂದರೆ ಅದು ಆಯಸ್ಸು. ಅದೇ ರೀತಿ ಹಿಂದಿನ ಕಾಲದಲ್ಲಿ ಬಹಳ ಮುಖ್ಯವಾಗಿ ಮೊದಲು ಆಯಸ್ಸನ್ನು ತೀರ್ಮಾನಿಸಿ ನಂತರವೇ ಜ್ಯೋತಿಷ್ಯದ ಫಲಗಳನ್ನು, ಯೋಗಗಳನ್ನು ಮತ್ತು ದೋಷಗಳನ್ನು ಹೇಳುತ್ತಿದ್ದರು.
ಆದರೆ ಹಿಂದಿನ ಕಾಲದಲ್ಲಿ ನಾವು ವಿದ್ಯೆ ಚೆನ್ನಾಗಿದೆಯೇ ? ಹಣ ಬರುತ್ತದೆಯೇ ? ಉದ್ಯೋಗ ಸಿಗುತ್ತದೆಯೇ ? ಯೋಗಗಳು ಇವೆಯೇ ? ಎಂದು ಕೇಳುತ್ತೇವೆ. ಆದರೆ ಆಯಸ್ಸಿನ ಬಗ್ಗೆ ಕೇಳಲು ಮರೆತು ಬಿಡುತ್ತೇವೆ. ಒಬ್ಬ ವ್ಯಕ್ತಿಯು ಯಾವುದೇ ಒಂದು ಯೋಗವನ್ನು ಅನುಭವಿಸಬೇಕು ಎಂದರೆ ಆಯಸ್ಸು ತುಂಬಾ ಮುಖ್ಯ. ಆಯಸ್ಸು ಇದ್ದರೆ ಮಾತ್ರ ಮುಂದಿನ ನಮ್ಮ ಜೀವನದ ಸುಖ ಪ್ರಾಪ್ತಿಯಾಗುತ್ತದೆ. ಆಯಸ್ಸು ಇದ್ದರೇನೇ ನಮ್ಮ ಜೀವನದಲ್ಲಿ ನಾವು ಎಲ್ಲವನ್ನೂ ಅನುಭವಿಸಲು ಸಾಧ್ಯ.

 

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬರಿಗೆ ಆಯಸ್ಸು ಎಷ್ಟಿರುತ್ತದೆ ಎನ್ನುವುದನ್ನು ಇಂದು ನಾವು ತಿಳಿದುಕೊಳ್ಳೋಣ.
ಆಯಸ್ಸನ್ನು ತೀರ್ಮಾನಿಸುವವನು ಆ ಭಗವಂತ ಒಬ್ಬನೇ. ಆಯಸ್ಸನ್ನು 3 ವಿಧಾನವಾಗಿ ವಿಂಗಡಿಸಬಹುದು. ಒಂದು ಅಲ್ಪ ಆಯಸ್ಸು, 2 ಮಧ್ಯ ಆಯಸ್ಸು, 3 ದೀರ್ಘಾಯಸ್ಸು. ಅಲ್ಪ ಆಯಸ್ಸು ಎಂದರೆ 30 ಅಥವಾ 40 ವರ್ಷದಲ್ಲಿ ಮೂರು ತೀರಿಕೊಳ್ಳುವುದು. ಮಧ್ಯಮ ಆಯಸ್ಸು ಎಂದರೆ 60 ರಿಂದ 70 ವಯಸ್ಸಿನಲ್ಲಿ ಮತ್ತು ಪೂರ್ಣ ಆಯಸ್ಸು ಎಂದರೆ ತೊಂಬತ್ತು ವರ್ಷಗಳಲ್ಲಿ ಮೃತ ಪಡುವುದು.ಒಬ್ಬರಿಗೆ ದೀರ್ಘ ಆಯಸ್ಸು ಇರಬೇಕಾದರೆ ಜಾತಕದಲ್ಲಿ ಗ್ರಹಗಳು ಹೇಗೆ ಇರಬೇಕು ? ಎನ್ನುವುದನ್ನು ಈಗ ತಿಳಿದುಕೊಳ್ಳೋಣ. ಜಾತಕದಲ್ಲಿ ಆಯಸ್ಸಿನ ಕಾರಕ ಗ್ರಹ ಶನಿ. ಶನಿ ಗ್ರಹದಿಂದಲೇ ನಾವು ಆಯಸ್ಸನ್ನು ತೀರ್ಮಾನಿಸಬೇಕು. ಅದರೆ ಅಷ್ಟಮಾಧಿಪತಿ ಬಲವಾಗಿರಬೇಕು. ಜಾತಕದಲ್ಲಿ ಲಗ್ನದಿಂದ ಎಂಟನೆ ಮನೆ ಎಂದರೆ ಅದು ಆಯಸ್ಸು,ಎಂಟನೇ ಮನೆಯ ರಾಶಿಯ ಅಧಿಪತಿ ಯಾರು ? ಎನ್ನುವುದನ್ನು ನೋಡಬೇಕು.
ಒಬ್ಬರು ದೀರ್ಘಾಯಸ್ಸಿನಿಂದ ಬಾಳಲು ಬೇಕಾದ ವಿಚಾರಗಳು

 

ಶನಿ ಗ್ರಹ ಉಚ್ಚ ಸ್ಥಾನದಲ್ಲಿರಬೇಕು ಅಥವಾ ಶನಿ ಗ್ರಹ ತನ್ನ ಸ್ವಂತ ಮನೆಯಲ್ಲಿ ಬಲವಾಗಿರಬೇಕು.ಶನಿ ಗ್ರಹ 8 ನೇ ಸ್ಥಾನವನ್ನು ಅಥವಾ ಲಗ್ನವನ್ನು ನೋಡಿದರೂ ಕೂಡ ಮತ್ತು ಗುರು, ಶನಿ ಒಬ್ಬರಿಗೊಬ್ಬರು ನೋಡಿದರೂ, ಜಾತಕದಲ್ಲಿ ಒಂದೇ ಕಡೆ ಸೇರಿದ್ದರೂ ಕೂಡ ಅವರಿಗೆ ದೀರ್ಘ ಆಯಸ್ಸು ಇರುತ್ತದೆ.ಗುರು ಗ್ರಹ ನೋಡಿದರೂ ಅವರಿಗೆ ದೀರ್ಘ ಆಯಸ್ಸು ಇರುತ್ತದೆ. ಇದೇ ರೀತಿ ಲಗ್ನಾಧಿಪತಿಯನ್ನು ಗುರು ಗ್ರಹ ನೋಡಿದರೂ ಮತ್ತು ಎಂಟನೆಯ ಅಧಿಪತಿಯನ್ನು ಗುರು ಗ್ರಹ ನೋಡಿದರೂ ಕೂಡ ದೀರ್ಘಾಯಸ್ಸು ಇರುತ್ತದೆ. ಗುರು, ಶನಿ ಒಟ್ಟಿಗೆ ಸೇರಿದ್ದರೂ ಕೂಡ ಇವರಿಗೆ ದೀರ್ಘ ಆಯಸ್ಸು ಇರುತ್ತದೆ. ಒಬ್ಬರ ಲಗ್ನದಲ್ಲಿ ಗುರು ಗ್ರಹ ಅಥವಾ ಶನಿ ಗ್ರಹ ಇದ್ದರೂ ಕೂಡ ಅವರಿಗೆ ದೀರ್ಘ ಆಯಸ್ಸು ಇರುತ್ತದೆ.ಇನ್ನು ಅಷ್ಟಮ ಸ್ಥಾನದ ಅಧಿಪತಿ ಸ್ವಂತ ಮನೆಯಲ್ಲಿ ಇದ್ದರೂ ಕೂಡ, ಉಚ್ಚ ಸ್ಥಾನದಲ್ಲಿ ಇದ್ದರೂ ಕೂಡ ಅವರಿಗೆ ದೀರ್ಘ ಆಯಸ್ಸು ಇರುತ್ತದೆ.
ಚಂದ್ರ ಗ್ರಹವನ್ನು ಗುರು ನೋಡಿದರೂ ಕೂಡ ದೀರ್ಘ ಆಯಸ್ಸು ಇರುತ್ತದೆ. ಯಾಕೆಂದರೆ ಚಂದ್ರ ಗ್ರಹವನ್ನು ದೇಹದ ಮತ್ತು ಮನಸ್ಸಿನ ಕಾರಣ ಎಂದು ಹೇಳಲಾಗುತ್ತದೆ. ಗುರು ಅಥವಾ ಶನಿ ಗ್ರಹ ಎಂಟನೇ ಸ್ಥಾನದಲ್ಲಿ ಇದ್ದರೂ ಕೂಡ ದೀರ್ಘಾಯಸ್ಸು ಇರುತ್ತದೆ. ದೈವಾನುಗ್ರಹ ಇದ್ದರೆ ದೈವ ಬಲ ಇದ್ದರೆ ಹೆಚ್ಚಿನ ಕಾಲ ಬಾಳಬಹುದು. ಅದಕ್ಕೆ ಭಕ್ತ ಮಾರ್ಕಂಡೇಯನ ಕಥೆಯೇ ಸಾಕ್ಷಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top