fbpx
ರಾಜಕೀಯ

ಡಿಕೆ ಶಿವಕುಮಾರ್ ಮತ್ತು ಅನಿಲ್ ಅಂಬಾನಿಯ ಒಟ್ಟಾಗಿ ನಿಂತಿರುವ ಫೋಟೋ ಕಂಡ ಬಿಜೆಪಿ ರಾಹುಲ್ ಗಾಂಧಿಗೆ ಏನೆಂದು ಪ್ರಶ್ನೆ ಕೇಳಿತು ಗೊತ್ತಾ?

ಮುಕೇಶ್ ಅಂಬಾನಿ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದು ಆ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಜೊತೆ ನಿಂತು ಒಂದು ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರು ಜೊತೆ ಇರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಆದ ಈ ಫೋಟೋವನ್ನು ಕಂಡ ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ಅವರು ಟ್ವೀಟ್ ಮಾಡಿ, ರಾಹುಲ್ ಗಾಂಧಿ ‘ಕಳ್ಳ ಕಳ್ಳ’ ಎಂದು ಹೇಳುವ ವ್ಯಕ್ತಿಯ ಜೊತೆ ಡಿಕೆ ಶಿವಕುಮಾರ್ ಇದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಅವರ ರಾಜೀನಾಮೆಯನ್ನು ಪಡೆಯುತ್ತಾರಾ? ಎಂಬ ಪ್ರಶ್ನೆಯನ್ನು ತೇಲಿಬಿಟ್ಟಿದ್ದಾರೆ.

ಯಾವಾಗಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನಿಲ್ ಅಂಬಾನಿ ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡುತ್ತಿರುತ್ತಾರೆ. ಈ ಹಿಂದೆ ನಿವೃತ್ತ ಎಚ್‍ಎಎಲ್ ಉದ್ಯೋಗಿಗಳ ಜೊತೆಗಿನ ಸಂವಾದದಲ್ಲಿ, ರಫೇಲ್ ಖರೀದಿ ಒಪ್ಪಂದದಲ್ಲಿ ಅನಿಲ್ ಅಂಬಾನಿಗೆ ಯಾವುದೇ ಅನುಭವವಿಲ್ಲ. ಎಚ್‍ಎಎಲ್ ಸಂಸ್ಥೆ ನಷ್ಟದಲ್ಲಿಲ್ಲ, ಆದರೆ ರಿಲಯನ್ಸ್ ನಷ್ಟದಲ್ಲಿದೆ. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಸಂಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ರಫೇಲ್ ಒಪ್ಪಂದ ನೀಡುವ ಮೂಲಕ ದೇಶದ ಸಾವಿರಾರು ಜನರ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ 35,000 ಕೋಟಿ ರೂಪಾಯಿ ಕೊಟ್ಟು ಒಪ್ಪಂದ ಮಾಡುವಲ್ಲಿ ಪ್ರಧಾನಿ ಉತ್ಸುಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು ಎಂಬುದು ಎಲಾಲರಿಗೂ ಗೊತ್ತಿದೆ.

ಹಾಗಾಗಿ ಈಗ ರಾಹುಲ್ ಗಾಂಧಿಯವರೇ ನಿಮ್ಮ ಕರ್ನಾಟಕದ ನಾಯಕ ಡಿಕೆ ಶಿವಕುಮರ್ ಅವರು ಮುಕೇಶ್ ಅಂಬಾನಿ ಜೊತೆಗೆ ಇರುವ ಈ ಫೋಟೋಗೆ ನಿಮ್ಮ ಅಭಿಪ್ರಾಯವೇನು? ಕಳ್ಳ ಎಂದು ಪಕ್ಷದ ಅಧ್ಯಕ್ಷರೇ ಹೇಳಿದ ವ್ಯಕ್ತಿ ಜೊತೆ ಸಚಿವರು ನಿಂತುಕೊಳ್ಳಲು ಹೇಗೆ ಸಾಧ್ಯ? ಈಗ ನೀವು ಡಿಕೆ ಶಿವಕುಮಾರ್ ಮೇಲೆ ಏನು ಕ್ರಮವನ್ನು ಕೈಗೊಳ್ಳುತ್ತೀರಿ? ಎಂದು ರಾಹುಲ್ ಗಾಂಧಿ ಅವರಿಗೆ ಜನ ಪ್ರಶ್ನೆಗಳ ಸುರಿಮಳೆ ಗೈಯುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top