fbpx
ತಂತ್ರಜ್ಞಾನ

ಮಾರುಕಟ್ಟೆಗೆ ಬಂದಿದೆ ಕ್ವಿಕ್ ಆಗಿ ಫೋನ್ ಚಾರ್ಜ್ ಮಾಡಲು ಸಹಕಾರಿಯಾಗುವ ವೈರ್ ಲೆಸ್ ಚಾರ್ಜರ್​ – ಬೆಲೆ ಎಷ್ಟು ಗೊತ್ತಾ ?

ಮೊಬೈಲ್/  ಫೋನ್ ಆಧುನಿಕ ಜಗ್ಗತ್ತಿನ ಅತಿ ದೊಡ್ಡ ಜನಪ್ರಿಯ ಸಂವಹನ ಮಾಧ್ಯಮ. ಈಗ ಫೋನ್ ಅಥವಾ ಮೊಬೈಲ್ ಯಾರ ಕೈಯಲ್ಲಿ ಇರಲ್ಲ ಹೇಳಿ!? ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಮೊಬೈಲ್ ಪ್ರಿಯರೆ .ಇನ್ನೂ ಮೊಬೈಲ್ ಬಳಸಿ ಜಾಸ್ತಿ ಕೆಲಸ ಮಾಡೋರ ಸಂಖ್ಯೆಯು ದಿನಕ್ಕಿಂತ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಹೀಗಿರುವ ಎಲ್ಲರಿಗೂ ಎದುರಾಗೋ ಸಾಮಾನ್ಯ ಸಮಸ್ಯೆ ಅಂದರೆ ಚಾರ್ಜಿನ್ಗ್ ಸಮಸ್ಯೆ. ಹೌದು, ಕೇಬಲ್ ಚಾರ್ಜರ್ ಬಳಸಿ ಮೊಬೈಲನ್ನು 100 % ಚಾರ್ಜ್ ಮಾಡಲು ಕನಿಷ್ಠ 1 ರಿಂದ 2 ಗಂಟೆಯಾದ್ರೂ ಬೇಕು ಜತೆಗೆ ಈ ವೈರ್ ಚಾರ್ಜರ್ ಗಳಿಂದ ಫೋನ್​ ಬಿಸಿಯಾಗುವ, ಓವರ್​ ಚಾರ್ಜ್ ಆಗುವ ​, ವೋಲ್ಟೇಜ್​ನಲ್ಲಿ ಹೆಚ್ಚು ಕಡಿಮೆಯಾಗಿ ಶಾರ್ಟ್​ ಆಗುವ ಸಂಭವವೇ ಜಾಸ್ತಿ. ಆದ್ದರಿಂದ ಕೆಲ ಜನರು ಕ್ವಿಕ್ ಆಗಿ ಚಾರ್ಜ್ ಆಗುವ ಮತ್ತು ಸೇಫ್ಟಿ ಗೆ ಆದ್ಯತೆ ನೀಡುವ ಚಾರ್ಜರ್ ಗಳ ಹುಡುಕಾಟದಲ್ಲಿದ್ದರು. ಇದೀಗ ಅವರೆಲ್ಲರ ಹುಡುಕಾಟಕ್ಕೆ ಸೂಪರ್ – ಡೂಪರ್ ಪರಿಹಾರವೊಂದು ಸಿಕ್ಕಿದೆ.

ಹೌದು,ಕ್ವಿಕ್​ ಆಗಿ ಫೋನ್​ ಚಾರ್ಜ್​ ಮಾಡಲು ಟೊರೆಟೊ ಕಂಪನಿ ಮ್ಯಾಜಿಕ್ ​(magik) ಎಂಬ ಕೇಬಲ ರಹಿತ ಚಾರ್ಜರ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈ ಚಾರ್ಜರ್ ನ ವಿಶೇಷ ಏನು ಗೊತ್ತಾ ?

*ಜೆಲ್ಲಿ ಫಿಶ್​ ರೀತಿಯ ಮೇಲ್ಮೈ ಅನ್ನು ಈ ಮ್ಯಾಜಿಕ್​ ಚಾರ್ಜರ್​ ಹೊಂದಿದೆ.
*ಫೋನ್​ ಜಾರಿಹೋಗದಂತೆ ತಡೆಯಲು ಸಿಲಿಕಾನ್​ ಕವರ್​ನ್ನು ಕೂಡ ನಿರ್ಮಿಸಲಾಗಿದೆ.
* ಬಿಲ್ಟ್​ ಇನ್​ ವೈಬ್ರೇಶನ್​ ಹಾಗೂ ಮೂರು ಎಲ್​ಇಡಿ ಲೈಟ್ಸ್​ನ್ನು ಕೂಡ ಈ ಸ್ಮಾರ್ಟ್ ಚಾರ್ಜರ್ ಒಳಗೊಂಡಿದೆ.
*ಸೂಕ್ಷ್ಮ ಇಂಡಕ್ಷನ್​ ಕಾಯಿಲ್​ ಮತ್ತು ಹೈ ಪವರ್​ ಚಿಪ್​ನ್ನು ಹೊಂದಿರುವ ಈ ಚಾರ್ಜರ್​ ತ್ವರಿತವಾಗಿ ನಿಮ್ಮ ಫೋನ್​ನ್ನು ಚಾರ್ಜ್​ ಮಾಡುತ್ತದೆ
* ಸ್ಮಾರ್ಟ್ ಚಾರ್ಜರ್ ಫೋನ್ ​ ಬಿಸಿಯಾಗುವುದು, ಓವರ್​ ಚಾರ್ಜ್​, ವೋಲ್ಟೇಜ್​ನಲ್ಲಿ ಹೆಚ್ಚು ಕಡಿಮೆಯಾಗಿ ಶಾರ್ಟ್​ ಆಗುವ ಸಂಭವಗಳನ್ನು ತಪ್ಪಿಸಬಹುದಾದ  ಸಾಮರ್ಥ್ಯ ಹೊಂದಿದೆ.
*ಸೇಫ್​ ಫೋನ್​ ಚಾರ್ಜಿಂಗ್​ ಸೌಲಭ್ಯವನ್ನು ಒದಗಿಸುತ್ತಿದೆ.
* ಫೋನ್​ ಸಂಪೂರ್ಣ ಚಾರ್ಜ್​ ಆದ ನಂತರ ತಾನಾಗಿಯೇ ಚಾರ್ಜ್​ ಸಪ್ಲೈ ಮಾಡುವುದನ್ನು ನಿಲ್ಲಿಸುವ ಟೆಕ್ನಾಲಜಿ ಇದರಲ್ಲಿ ಅಡಕವಾಗಿದೆ.
*ಈ ಸ್ಮಾರ್ಟ್ ಚಾರ್ಜರ್ ನಲ್ಲಿ ಕಲರ್​ಫುಲ್​ ಬೆಳಕು ನೀಡುವ ಲ್ಯಾಂಪ್​ ಆಗಿಯೂ ಕೆಲಸ ಮಾಡುತ್ತದಂತೆ.

ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಈ ಸ್ಮಾರ್ಟ್ ವೈರ್ ಲೆಸ್ ಚಾರ್ಜರ್ ಬೆಲೆ 1999 ರೂಪಾಯಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top