ದೇವರು

ಇಂದು ಹನುಮ ಜಯಂತಿ ಹಾಗೂ ಸಂಜೆ ಪ್ರದೋಷ ಕಾಲ,ಈ ದಿನದ ಮಹತ್ವವೇನು,ಇದರಿಂದ ಸಿಗುವ ಫಲ ಏನು ಗೊತ್ತಾ

ಇಂದು ಸಂಜೆ ಪ್ರದೋಷ ಕಾಲ ಮತ್ತು ಹನುಮ ಜಯಂತಿಯ ವಿಶೇಷವಾದ ದಿನವಾದ ಇಂದು ಹೇಗೆ ಪ್ರದೋಷ ಕಾಲವನ್ನು ಆಚರಿಸಬೇಕು ?
ಈ ದಿನ ಗುರುವಾರದ, ಪ್ರದೋಷ ಕಾಲ, ಸಂಕಷ್ಟ ನಿವಾರಣೆಗೆ ಉತ್ತಮವಾದ ಸಮಯ ಎಂದು ಹೇಳಲಾಗುತ್ತದೆ. ಈ ದಿನ ವಿಶೇಷವಾಗಿ ಯಾವ ದೇವರ ಆರಾಧನೆಯನ್ನು ಮಾಡಬೇಕು ? ಮತ್ತು ಮನೆಯಲ್ಲಿ ಸುಖ ಶಾಂತಿ ನೆಲೆಸಿಲ್ಲ ಎಂದರೆ ಯಾವ ಯಾವ ಪರಿಹಾರಗಳನ್ನು ಮಾಡಿಕೊಳ್ಳಬಹುದು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ತಿಂಗಳಿಗೆ ಎರಡು ಬಾರಿ ಈ ಪ್ರದೋಷ ಕಾಲ ಬರುತ್ತದೆ. ಅದರಲ್ಲಿಯೂ ವಿಶೇಷವಾಗಿ ಇದು ಧನುರ್ಮಾಸದ ಸಮಯ ಮತ್ತು ಇಂದು ಹನುಮ ಜಯಂತಿ. ಈ ಹನುಮ ಜಯಂತಿಯ ದಿನ ಪ್ರದೋಷ ಕಾಲ ಬಂದಿರುವಂತದ್ದು ತುಂಬಾ ವಿಶೇಷ. ಇದಕ್ಕೆ ಯಾಕೆ ಇಷ್ಟೊಂದು ಮಹತ್ವ ಎಂದರೆ ಇಂದು ಹನುಮ ಜಯಂತಿ ಹನುಮ ಎಂದರೆ ರುದ್ರಾಂಶ ಸಂಭೂತ ಹೊಂದಿರುವವನು. ಆದ್ದರಿಂದ ಇಂದು ರುದ್ರನ ಆರಾಧನೆಯನ್ನು ಪ್ರದೋಷದ ಸಂದರ್ಭದಲ್ಲಿ ಮಾಡಬೇಕು.ಈ ದಿನ ಸಂಜೆ 4:30 ರ ನಂತರ ರುದ್ರನ ಆರಾಧನೆಯನ್ನು, ರುದ್ರನ ಜಪವನ್ನು ಮಾಡಬೇಕು. ಈ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ವಿಶೇಷವಾದ ಫಲಗಳು ಲಭಿಸುತ್ತವೆ.

 

 

 

ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮತ್ತು ಒಂದೊಂದು ವಿಧವಿಧವಾದ ಅಭಿಷೇಕದಿಂದ ಕೂಡ ಒಂದೊಂದು ಸಂಕಷ್ಟಗಳಿಂದ ವಿಮುಕ್ತಿಯಿಂದ ಹೊಂದಬಹುದು. ಹಾಲಿನ ಅಭಿಷೇಕ, ಮೊಸರಿನ ಅಭಿಷೇಕ,ತುಪ್ಪದ ಅಭಿಷೇಕ, ಜೇನು ತುಪ್ಪದ ಅಭಿಷೇಕ ಈ ರೀತಿ ವಿವಿಧ ಅಭಿಷೇಕಗಳಿಗೆ ವಿವಿಧ ಫಲಗಳು ಲಭಿಸುತ್ತವೆ. ಆರೋಗ್ಯವೃದ್ಧಿಗೆ ಸಂಬಂಧಪಟ್ಟಂತೆ ನೋಡಿದಾಗ ಎಳ್ಳೆಣ್ಣೆಯಿಂದ ಅಭಿಷೇಕವನ್ನು ಮತ್ತು ಜೇನುತುಪ್ಪದಿಂದ ಅಭಿಷೇಕವನ್ನು ಈ ದಿನ ಪ್ರದೋಷ ಕಾಲದಲ್ಲಿ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ.ಆರ್ಥಿಕ ವೃದ್ಧಿಯಾಗಬೇಕು, ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಬೇಕು ಎಂದರೆ ಹಾಲಿನ ಅಭಿಷೇಕ ಮಾಡಿಸಬೇಕು. ಕೆಲಸ ಕಾರ್ಯಗಳು ಆಗುತ್ತಿಲ್ಲ ಒಬ್ಬರಿಗೊಬ್ಬರಿಗೆ ಶತ್ರುತ್ವ ,ಈ ರೀತಿ ಇದ್ದರೆ ಮೊಸರಿನ ಅಭಿಷೇಕವನ್ನು ಈ ದಿನ ಪ್ರದೋಷ ಕಾಲದಲ್ಲಿ ಮಾಡಬೇಕು. ಈ ರೀತಿ ಮಾಡಿದರೆ ವಿಶೇಷವಾದ ಫಲಗಳು ಲಭಿಸುತ್ತವೆ.

ಕಬ್ಬಿನ ಹಾಲಿನ ಅಭಿಷೇಕ ಮತ್ತು ಗಿಡಮೂಲಿಕೆಗಳ ಅಭಿಷೇಕವನ್ನು ಕೂಡ ಮಾಡಬಹುದು. ಕಬ್ಬಿನ ಹಾಲಿನ ಅಭಿಷೇಕ ಮಾಡುವುದರಿಂದ ಯಥೇಚ್ಛವಾದ ಅಭಿವೃದ್ಧಿಗಳು ಮತ್ತು ಜಡತ್ವಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಮಂದತ್ವ ಕಾಡುತ್ತಿದೆ ಕೆಲಸ ಮಾಡಲು ಉತ್ಸಾಹ ಇಲ್ಲ ಎನ್ನುವವರು ಕಬ್ಬಿನ ಹಾಲಿನ ಅಭಿಷೇಕವನ್ನು ಶಿವನಿಗೆ ಮಾಡಿಸಿ ಮತ್ತು ಭಗವಂತನ ಕೃಪೆಗೆ ಪಾತ್ರರಾಗಿ .ಈ ವಿಶೇಷವಾದ ದಿನವನ್ನು ಸದುಪಯೋಗ ಪಡಿಸಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top