fbpx
ಸಮಾಚಾರ

ಐಸ್ ಕ್ರೀಮ್ ಮಾರಿದ ಭಟ್ರು !

ಖಾಸಗಿ ವಾಹಿನಿಯ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮ ಅದ್ಭುತವಾಗಿ ಮೂಡಿಬರುತ್ತಿದ್ದು, ಹಲವರ ಮನಸೂರೆ ಗೊಂಡಿದೆ. ಪ್ರತಿವಾರವೂ ಒಬ್ಬೊಬ್ಬ ಕಲಾವಿದರು ಬಂದು ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಾರೆ . ಹಾಗಾಗಿ ಕಳೆದ ವಾರದ ಸಂಚಿಕೆಯಲ್ಲಿ ‘ಲೂಸ್ ಮಾದ’ ಯೋಗಿ, ಸಚಿನ್ ಅವರಿಗೋಸ್ಕರ ಬಲೂನ್ ಮಾರಿ ಹಣಕಾಸಿನ ಸಹಾಯ ಹಸ್ತ ಚಾಚಿದ್ದರೂ. ಹಾಗೆಯೇ ಈ ವಾರದ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ನಿರ್ದೇಶಕ, ಗೀತ ಸಾಹಿತಿ ‘ಯೋಗರಾಜ್ ಭಟ್ ‘ಭಾಗವಹಿಸಿದ್ದಾರೆ ಅದರೊಂದಿಗೆ ‘ಪಂಚತಂತ್ರ’ ಚಿತ್ರದ ನಾಯಕ ವಿಹಾನ್ ಕೂಡ ಭಾಗವಹಿಸಿದ್ದಾರೆ. ಹೌದು, ‘ಸದಾ ನಿಮ್ಮೊಂದಿಗೆ’ ಮೂಲಕ ಈ ಬಾರಿ ಐಸ್ಕ್ರೀಮ್ ವ್ಯಾಪಾರಿ ಶಿವಕುಮಾರ್​ಗೆ ಯೋಗರಾಜ್ ಭಟ್ ಮತ್ತು ವಿಹಾನ್ ಸಹಾಯ ಮಾಡಿದ್ದಾರೆ.

ಯಾರೂ ಈ ಐಸ್ಕ್ರೀಮ್ ವ್ಯಾಪಾರಿ ಶಿವಕುಮಾರ್ ?

  • ಅಪ್ರತಿಮ ಕ್ರೀಡಾಪಟುವಾಗಿದ್ದ ಶಿವಕುಮಾರ್, ಅಂತಾರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ.
  • 2017ರ ಅಂತಾರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿ ಪ್ರಥಮ ಸ್ಥಾನ ಪಡೆಯುವ ಮುಖಾಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿರುವ ಅದ್ಭುತ ಕ್ರೀಡಾ ಪಟು.
  • ವಿಪರ್ಯಾಸ ಎಂದರೆ ಸದ್ಯಕ್ಕೆ ಶಿವಕುಮಾರ್ ರವರ ಜೀವನದ ಪರಿಸ್ಥಿತಿ ತೀರಾ ಬದಲಾಗಿದೆ. ಅಕ್ಕಂದಿರ ಮದುವೆಗೆ ಮಾಡಿದ ಸಾಲವನ್ನು ತೀರಿಸಲು ತೊಂದರೆಯಾಗಿದೆ. ಹಾಗಾಗಿ ಆಟವನ್ನು ಪಕ್ಕಕ್ಕೆ ಸರಿಸಿ, ಸದ್ಯಕ್ಕೆ ಐಸ್ಕ್ರೀಮ್ ಅಂಗಡಿ ನಡೆಸುತ್ತಿದ್ದಾರೆ.

ಇದೀಗ ಶಿವಕುಮಾರ್​ಗೆ ಸಹಾಯ ಮಾಡುವುದಕ್ಕೆ ‘ಪಂಚತಂತ್ರ’ ತಂಡ ಮುಂದಾಗಿದ್ದು , ಕೆಲ ಗಂಟೆಗಳ ಕಾಲ ಶಿವಕುಮಾರ್ ಜತೆಗೆ ನಿಂತು ಚಿತ್ರದ ಪ್ರಚಾರದ ಜತೆಗೆ ಐಸ್ಕ್ರೀಮ್ ಸಹ ಮಾರಾಟ ಮಾಡಿದ್ದಾರೆ ಭಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top