fbpx
ಭವಿಷ್ಯ

23 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ಡಿಸೆಂಬರ್ ೨೩, ೨೦೧೮
ಸೂರ್ಯೋದಯ :೦೭:೧೧
ಸೂರ್ಯಾಸ್ತ :೧೮:೦೩

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಾಡ್ಯ – ೨೦:೧೧ ವರೆಗೆ
ನಕ್ಷತ್ರ : ಆರಿದ್ರ – ೨೦:೫೨ ವರೆಗೆ
ಯೋಗ : ಶುಕ್ಲ – ೦೯:೨೧ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :೧೨:೧೬ – ೧೨:೫೮
ಅಮೃತಕಾಲ : ೧೧:೫೨ – ೧೩:೧೮
ರಾಹು ಕಾಲ: ೧೬:೩೮ – ೧೭:೫೯
ಗುಳಿಕ ಕಾಲ: ೧೫:೧೮ – ೧೬:೩೮
ಯಮಗಂಡ:೧೨:೩೭ – ೧೩:೫೭

ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಬಲವಿದೆ. ದೂರವಾಗಿದ್ದ ಮಿತ್ರರು ಹತ್ತಿರ ಬರುವರು. ನಿಮ್ಮ ಕೆಲಸಗಳು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವವು. ಹಣಕಾಸು ಸ್ಥಿತಿ ಸಾಧಾರಣವಾಗಿರುವುದು.

 

ಒಂದೇ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮಹತ್ತರವಾದ ಕೆಲಸ ಹಾಳಾಗುವ ಸಂಭವ ಇದೆ. ಅದಕ್ಕೆ ಆಸ್ಪದ ಕೊಡದೆ ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿ. ಎಲ್ಲವೂ ಒಳಿತಾಗುವುದು.

 

ಮಾತು ಆಡಿದರೆ ಆಯಿತು. ಮುತ್ತು ಒಡೆದರೆ ಹೋಯಿತು ಎನ್ನುವಂತೆ ನಿಮ್ಮ ಸಂಕಷ್ಟದ ದಿನಗಳಲ್ಲಿ ಬಹು ಎಚ್ಚರಿಕೆಯಿಂದ ಎದುರಾಳಿಯನ್ನು ಎದುರಿಸಬೇಕು. ಬಾಯಿ ತಪ್ಪಿ ಆಡಿದ ಮಾತಿಗೆ ವಿಪರೀತವಾದ ದಂಡ ತೆರಬೇಕಾಗುವುದು.

 

ವಿರೋಧಿಗಳನ್ನು ಮಾತಿನ ಮೂಲಕ ಸೋಲಿಸುವ ಚಾಕಚಕ್ಯತೆ ನಿಮ್ಮಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಅಪರಿಚಿತರ ಬಳಿ ವ್ಯವಹರಿಸುವಾಗ ಮಾತ್ರ ಎಚ್ಚರದಿಂದ ಇರಿ.

 

 

ನಿಮಗೆ ತಿಳಿದುದಕ್ಕಿಂತಲೂ ಹೆಚ್ಚು ತಿಳಿದುಕೊಂಡು ಏನೂ ತಿಳಿಯದಂತೆ ನಟಿಸುವ ಜನರಿರುವುದರಿಂದ ಎಚ್ಚರದಿಂದ ಇರಬೇಕು. ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿ. ಎಲ್ಲವೂ ಒಳಿತಾಗುವುದು.

 

 

ಬರೀ ಹಗುರ ಮಾತನಾಡುತ್ತ ದಿನ ಕಳೆಯಬೇಡಿ. ನಿಮ್ಮ ವಿದ್ವತ್‌, ಪಾಂಡಿತ್ಯಕ್ಕೆ ಬೆಲೆ ನೀಡಿ ನಿಮ್ಮನ್ನು ಜನರು ಆದರಿಸುವರು. ಹಾಗಾಗಿ ಸಣ್ಣತನ ತೋರಿ ಹಗುರ ಆಗದಿರಿ. ನಿಮ್ಮ ನಡೆ ನುಡಿಯಲ್ಲಿ ಗಾಂಭೀರ್ಯತೆಯನ್ನು ರೂಢಿಸಿಕೊಳ್ಳಿ.

 

 

ಅತಿ ಆಸೆ ಗತಿ ಗೆಡಿಸಿತು ಎನ್ನುವಂತೆ ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಕೈಹಾಕದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿತರೆ ಜೀವನದಲ್ಲಿ ಯಶಸ್ಸನ್ನು ಹೊಂದುವಿರಿ.

 

 

ನಿಮ್ಮ ವರ್ಚಸ್ಸನ್ನು ಹಾಳು ಮಾಡಲು ಸಂಚು ನಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವು ವಿಚಾರಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಇಲ್ಲದೆ ಇದ್ದರೆ ಜನ ದುರುಪಯೋಗ ಮಾಡಿಕೊಳ್ಳುವರು.

ನೀವು ಮಾಡುತ್ತಿರುವ ಕೆಲಸಗಳಲ್ಲಿ ಕೆಲವರು ಮೂಗು ತೂರಿಸಿ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುತ್ತಾರೆ. ನಿಮ್ಮ ಬುದ್ಧಿಮತ್ತೆಯನ್ನು ನಂಬಿ ಕೆಲಸ ಮಾಡಿ.

 

 

ನಡೆಯಬೇಕಾದ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರ ಮತ್ತು ಕಠಿಣವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು.

 

ತೀರಾ ಸರಳ ಮಾರ್ಗದಿಂದ ಧನ ಲಾಭದ ದಾರಿ ತೆರೆದುಕೊಳ್ಳುವುದೆಂಬ ದಡ್ಡತನವನ್ನು ಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣ ದೊರೆಯುವುದಿಲ್ಲ.

 

ನಿಮ್ಮ ಬಳಿ ವಿವಿಧ ರೀತಿಯ ಜನರು ಬಂದು ತಮ್ಮ ಸ್ವಾರ್ಥವನ್ನು ಮೊದಲು ಪೂರೈಕೊಳ್ಳುವರು. ಅಂಥವರನ್ನು ಎಚ್ಚರದಿಂದ ಸಾಗ ಹಾಕಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top