fbpx
ರಾಜಕೀಯ

ಉಪಮುಖಮಂತ್ರಿಗಳಿಗೆ ಟಾಂಗ್ ಕೊಟ್ಟ ಬಿಎಸ್​ ಯಡಿಯೂರಪ್ಪ

ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಸನ್ಮಾನ್ಯ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಕಾಂಗ್ರೆಸ್ಗೆ ಆಹ್ವಾನಿಸಿದ್ದರು. ಇದೀಗ ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಸೇರಿ ಅನ್ನುವ ಆಹ್ವಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಆಹ್ವಾನಕ್ಕೆ ಉತ್ತರ ನೀಡಿರುವ ಯಡಿಯೂರಪ್ಪ, “ಡಾ.ಪರಮೇಶ್ವರ್ ಅವರ ಮೇಲೆ ನನಗೆ ಗೌರವ ಇದೆ. ಅವರು ಈ ರೀತಿ ಹಗುರವಾಗಿ ಮಾತನಾಡಬಾರದು. ಕಾಂಗ್ರೆಸ್ನಲ್ಲಿ ಅಸಮಾಧಾನ ಇದೆ. ಹಾಗಾಗಿ ನಾನೇ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನಿಸುತ್ತೇನೆ ಎಂದರು. ಅವರು ಬಿಜೆಪಿಗೆ ಬರುವುದಾದರೆ ಅವರಿಗೆ ಸೂಕ್ತ ಸ್ಥಾನಮಾನ ಗೌರವ ಕೊಡುತ್ತೇವೆ. ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದ್ದೇವೆ. ಚಿಕ್ಕೋಡಿ, ಬೆಳಗಾವಿ ಭಾಗದ ಪ್ರಮುಖರ ಸಭೆ ನಡೆಸಿದ್ದೇವೆ ” ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರೂ.

ಮುಂದುವರೆದು ಮಾತನಾಡಿದ ಬಿಎಸ್ ಯಡಿಯೂರಪ್ಪ ಇಂದು ಸಂಜೆ ಮಂತ್ರಿಮಂಡಳ ವಿಸ್ತರಣೆ ಆಗುತ್ತಿದೆ, ಇನ್ನೂ ಮುಂದಾದರೂ ಸರ್ಕಾರ ಅಭಿವೃದ್ಧಿಯ ಕಡೆ ಗಮನ ಕೊಡಲಿ. ಆಗಲೇ ಅತೃಪ್ತರು ತಮ್ಮ ಅಸಮಾಧಾನಗಳನ್ನು ಹೊರ ಹಾಕುತ್ತಿದ್ದಾರೆ. ನಾವು ಅತೃಪ್ತರ ನಡೆ ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಂತರ ನಮ್ಮ ನಿರ್ಧಾರ ಏನು ಎಂದು ತಿಳಿಸುತ್ತೇವೆ. ಇದುವರೆಗೆ ಯಾವುದೇ ಅತೃಪ್ತರು ನಮ್ಮನ್ಮು ಸಂಪರ್ಕಿಸಿಯೂ ಇಲ್ಲ ಮಾತುಕತೆಯನ್ನೂ ನಡೆಸಿಲ್ಲ. ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಮಗೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಹಿಂದೆಯೂ ಕೊಟ್ಟಿಲ್ಲ, ಮುಂದೆಯೂ ಇಲ್ಲ. ನಾವು ಹೋಗುವುದೂ ಇಲ್ಲ ಎಂದು ಹೇಳಿ ಮಾತು ಮುಗಿಸಿದರೂ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top