fbpx
ಭವಿಷ್ಯ

25 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಮಂಗಳವಾರ, ಡಿಸೆಂಬರ್ ೨೫, ೨೦೧೮
ಸೂರ್ಯೋದಯ :೦೭:೧೨
ಸೂರ್ಯಾಸ್ತ :೧೮:೦೪

ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ – ೧೩:೪೭ ವರೆಗೆ
ನಕ್ಷತ್ರ : ಪುಷ್ಯ – ೧೫:೫೫ ವರೆಗೆ
ಯೋಗ : ವೈಧೃತಿ – ೨೧:೫೦ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :೧೨:೧೭ – ೧೨:೫೯
ಅಮೃತಕಾಲ : ೧೦:೧೦ – ೧೧:೩೭
ರಾಹು ಕಾಲ: ೧೫:೧೯ – ೧೬:೩೯
ಗುಳಿಕ ಕಾಲ: ೧೨:೩೮ – ೧೩:೫೮
ಯಮಗಂಡ:೦೯:೫೭ – ೧೧:೧೭

ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ದುಡುಕುತನದಿಂದ ಕೆಲಸ ಕಾರ್ಯಗಳು ಕೆಟ್ಟು ಹೋಗುವವು. ಸ್ನೇಹಿತರ ಸಲಹೆಯಿಂದಾಗಿ ಆಗಲಿರುವ ವಂಚನೆಯಿಂದ ಪಾರಾಗುವಿರಿ.

 

ಬಂಧುಗಳೊಂದಿಗೆ ಆದ ವೈಮನಸ್ಸು ನಿಮ್ಮನ್ನು ಒಂಟಿತನಕ್ಕೆ ಈಡು ಮಾಡುವುದು. ದುಡುಕುತನ ಬೇಡ. ಮಾನಸಿಕ ಏಕಾಗ್ರತೆಗಾಗಿ ಅಧ್ಯಯನ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕಬೇಡಿ

 

ಆಗಿಹೋದ ಕಹಿ ಘಟನೆಗಳ ನೆನಪಿನಿಂದ ನೋವು ಮರುಕಳಿಸುತ್ತದೆಯೇ ಹೊರತು ಅದರಿಂದ ಪ್ರಯೋಜನವಿಲ್ಲ. ಸಂಗಾತಿಯಿಂದ ಸಾಂತ್ವನದ ಮಾತನ್ನು ಕೇಳುವಿರಿ. ಯೋಗ್ಯರ ಸಲಹೆಯಿಂದ ಮಾತ್ರ ಸಮಸ್ಯೆ ದೂರವಾಗಲಿದೆ.

 

ವಿನಾಕಾರಣ ಶತ್ರುಗಳ ಬಾಧೆ ನಿಮ್ಮನ್ನು ಬಾಧಿಸಲಿದೆ. ಇಲ್ಲಸಲ್ಲದ ಸಮಸ್ಯೆಗಳು ನಿಮಗೆ ಸಂಬಂಧವಿಲ್ಲದಿದ್ದರೂ ಸುತ್ತಿಕೊಳ್ಳಲಿದೆ. ಸಣ್ಣ ಸಣ್ಣ ಅಡಚಣೆಗಳನ್ನು ನಿಭಾಯಿಸಲು ಅತಿ ಪ್ರಯಾಸ ಪಡುವಿರಿ.

 

 

ನಿಮ್ಮ ಸಣ್ಣ ಅಚಾತುರ್ಯದಿಂದ ಇಡೀ ಕುಟುಂಬವೇ ಕಷ್ಟ ಪಡಬೇಕಾಗುವುದು. ಪ್ರತಿಯೊಂದನ್ನು ಕೂಡಾ ಆತ್ಮ ವಿಶ್ವಾಸದಿಂದ ಎದುರಿಸಿರಿ.ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

 

 

ಎಂಥವರೇ ಆಗಲಿ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಅತಿ ಬುದ್ಧಿವಂತಿಕೆ ಲೆಕ್ಕಾಚಾರದಿಂದಾಗಿ ಹಣಕಾಸು ನಷ್ಟವಾಗಬಹುದು. ಅಥವಾ ಬೇಡದ ವಸ್ತುಗಳ ಕೊಳ್ಳುಬಾಕತನದಿಂದಾಗಿ ವಿಪರೀತ ಖರ್ಚಾಗುವುದು.

 

 

ಆಗದ ಕೆಲಸಗಳನ್ನು ಮತ್ತಾರದೋ ಒತ್ತಾಯಕ್ಕೆ ಒಪ್ಪಿಕೊಂಡಲ್ಲಿ ಸಮಸ್ಯೆಗಳು ನಿಮ್ಮನ್ನು ಅಪ್ಪಿಕೊಳ್ಳಲಿವೆ. ನಿಮ್ಮ ಕೆಲಸಗಳನ್ನು ಮತ್ತೊಬ್ಬರಿಗೆ ವಹಿಸಿದಲ್ಲಿ ಅಲ್ಲೂ ತೊಂದರೆಗಳು ತಪ್ಪಿದ್ದಲ್ಲ. ಪ್ರತಿಯೊಂದನ್ನು ಕೂಡಾ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ.

 

 

ಆದಷ್ಟು ನಿಮ್ಮ ಪಾಡಿಗೆ ನೀವಿರುವುದು ಎಲ್ಲಾ ದೃಷ್ಟಿಯಿಂದ ಹಿತ. ಪರರ ಚಿಂತೆ ಪರದಾಡುವಂತೆ ಮಾಡುವುದು.ನಿಮ್ಮ ಉದಾಸೀನ ಪ್ರವೃತ್ತಿಯಿಂದಾಗಿ ಆರೋಗ್ಯದಲ್ಲಿ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುವುದು.

ಕೆಲವೊಮ್ಮೆ ನೀವೇ ಎಲ್ಲಾ ತಿಳಿದವರಂತೆ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಹಾಗೂ ಅವಮಾನಕ್ಕೆ ಗುರಿಯಾಗುವಿರಿ. ತಿಳಿದಿದ್ದರೂ ತಿಳಿಯದಂತಿರುವುದು ಜಾಣರ ಲಕ್ಷ ಣ ಎಂಬುದನ್ನು ಮರೆಯದಿರಿ. ಅನುಭವಿಗಳ ಸಲಹೆಗಳನ್ನು ಅಲಕ್ಷಿಸಬೇಡಿರಿ.

 

 

ರಾತ್ರಿ ಆದ ಮೇಲೆ ಬೆಳಕು ಬರಲೇ ಬೇಕು. ಹಾಗಾಗಿ ಜೀವನದಲ್ಲಿ ನಿರಾಶೆ ಹೊಂದದಿರಿ. ಮಾತುಗಳನ್ನು ಆಡುವಾಗ ಎಚ್ಚರದಿಂದಿರಿ. ನೆರೆಹೊರೆಯವರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿರಿ.

 

ನೀವು ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ ಇರುವುದು. ಅಪರಿಚಿತರ ಮರುಳು ಮಾತಿಗೆ ಮೋಸ ಹೋಗಬೇಡಿ. ಆಗುತ್ತಿರುವ ಇತಿಮಿತಿಯಿಲ್ಲದ ಖರ್ಚಿಗೆ ಕಡಿವಾಣ ಹಾಕಿರಿ.

 

ಧಾರಾಳತನ ಒಳ್ಳೆಯದೇ ಆದರೂ ಅದಕ್ಕೊಂದು ಮಿತಿ ಹಾಕುವುದು ಉತ್ತಮ. ಇಲ್ಲವಾದಲ್ಲಿ ಸಾಲದ ಸಂಕೋಲೆ ನಿಮ್ಮನ್ನು ಸುತ್ತಿಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top