ವಿಶೇಷ

ಭಾರತ ದೇಶದ ಎಲ್ಲಾ ರಾಷ್ಟೀಯ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳಿ.

ಭಾರತ ದೇಶವಿದು ಭವ್ಯ ನಾಡು, ಸರ್ವಧರ್ಮದ ನೆಲೆಬೀಡು. ಜಾತಿ -ಮತ-ಧರ್ಮ ಬೇರೆ ಬೇರೆಯಾಗಿದ್ದರೂ ರಾಷ್ಟ್ರ ಎಂದು ಬಂದಾಗ ನಮ್ಮೆಲ್ಲರ ನಾಭಿಯಿಂದ ಸುಲಲಿತವಾಗಿ ಹೊರಹೊಮ್ಮುವುದು ರಾಷ್ಟ್ರಗೀತೆಯೇ. ಕಪ್ಪು, ಕಂದು, ಬಿಳಿ ಬಣ್ಣದ ಕೈ ಗಳೂ ತಲೆ ಎತ್ತಿ ಸೆಲ್ಯೂಟ್ ಒಡೆಯೋದು ನಮ್ಮ ರಾಷ್ಟ್ರ ಬಾವುಟಕ್ಕೆ ಅಲ್ಲವೇ?

ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತಿರುವ ನಮ್ಮ ಭಾರತ ಅದರದೇ ವಿಶಿಷ್ಟ ಚಿಹ್ನೆಗಳನ್ನು ಹೊಂದಿದೆ. ಸಾಮಾನ್ಯವಾಗಿ ನಾವು ರಾಷ್ಟ್ರ ಬಾವುಟ, ರಾಷ್ಟ್ರೀಯ ಪ್ರಾಣಿ-ಪಕ್ಷಿ ಯಾವುದು ಹೇಳಿ ಎಂದರೆ ಹೇಳಿಬಿಡುತ್ತೇವೆ. ಆದರೆ ಇದರೊಂದಿಗೆ ಇನ್ನಷ್ಟು ರಾಷ್ಟ್ರೀಯ ಚಿಹ್ನೆಗಳಿವೆ ಎಂಬುದನ್ನು  ಮರೆತು ಬಿಡುತ್ತೇವೆ, ಹೀಗಾಗಿ ಆ ರಾಷ್ಟ್ರೀಯ ಚಿಹ್ನೆಗಳು ಯಾವುದೆಂದು ನಾವಿಲ್ಲಿ ನೋಡೋಣ :

ರಾಷ್ಟ್ರಧ್ವಜ – ತ್ರಿವರ್ಣ ಧ್ವಜ

ರಾಷ್ಟ್ರ ಚಿಹ್ನೆ -ಸಾರಾನಾಥದಲ್ಲಿರುವ ನಾಲ್ಕು ತಲೆಯುಳ್ಳ ಸಿಂಹ

ರಾಷ್ಟ್ರೀಯ ಪ್ರಾಣಿ – ಹುಲಿ

ರಾಷ್ಟ್ರೀಯ ಪಕ್ಷಿ – ನವಿಲು

ರಾಷ್ಟ್ರೀಯ ಜಲಚರ ಪ್ರಾಣಿ – ಡಾಲ್ಫಿನ್

ರಾಷ್ಟ್ರೀಯ ಕ್ಯಾಲೆಂಡರ್ – ಶಕ ಕ್ಯಾಲೆಂಡರ್

ರಾಷ್ಟ್ರಗೀತೆ – ಜನಗಣಮನ

ನಾಡಗೀತೆ – ವಂದೇ ಮಾತರಂ

ರಾಷ್ಟ್ರೀಯ ಹೂ – ಕಮಲ

ರಾಷ್ಟ್ರೀಯ ನದಿ – ಗಂಗಾ ನದಿ

ರಾಷ್ಟ್ರೀಯ ಹಣ್ಣು – ಮಾವು

ರಾಷ್ಟ್ರೀಯ ಮರ – ಆಲದ ಮರ

ರಾಷ್ಟ್ರೀಯ ಕವಿ – ರವೀಂದ್ರನಾಥ್ ಠಾಗೋರ್ ಮತ್ತು ಬಂಕಿಮ ಚಂದ್ರ ಚಟರ್ಜಿ

ರಾಷ್ಟ್ರೀಯ ನಾಣ್ಯ – ಇಂಡಿಯನ್ ರೂಪಿ

ರಾಷ್ಟ್ರೀಯ ಕ್ರೀಡೆ – ಹಾಕಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top