ಭವಿಷ್ಯ

26 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ಡಿಸೆಂಬರ್ ೨೬, ೨೦೧೮
ಸೂರ್ಯೋದಯ :೦೭:೧೨
ಸೂರ್ಯಾಸ್ತ :೧೮:೦೪

ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ – ೧೦:೪೬ ವರೆಗೆ
ನಕ್ಷತ್ರ : ಆಶ್ಲೇಷ – ೧೩:೩೯ ವರೆಗೆ
ಯೋಗ : ವಿಷ್ಕುಂಭ – ೧೮:೧೩ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :ಯಾವುದೂ ಇಲ್ಲ
ಅಮೃತಕಾಲ : ೧೨:೧೨ – ೧೩:೩೯
ರಾಹು ಕಾಲ: ೧೨:೩೮ – ೧೩:೫೯
ಗುಳಿಕ ಕಾಲ: ೧೧:೧೮ – ೧೨:೩೮
ಯಮಗಂಡ:೦೮:೩೭ – ೦೯:೫೭

ಬಂಧುಗಳ ಆಗಮನವು ಮನಸ್ಸಿಗೆ ಮುದ ನೀಡುವುದು. ಬಹುದಿನದ ನಿರೀಕ್ಷೆಯು ಫಲ ನೀಡುವುದು. ಹಾಗಾಗಿ ಒಂದು ಹಂತದ ಚಿಂತೆಗೆ ವಿರಾಮ ದೊರೆಯುವುದರಿಂದ ನಿಮ್ಮ ಮುಂದಿನ ಕಾರ್ಯ ಸುಲಲಿತವಾಗುವುದು.

 

ಸತ್ಯದ ಮಾರ್ಗದಲ್ಲಿ ಯಶಸ್ಸು ಇದೆ. ಹಾಗಾಗಿ ನಿಮ್ಮ ಇವತ್ತಿನ ಆರ್ಥಿಕ ಸ್ಥಿತಿಯ ಬಗ್ಗೆ ಮನೆಯವರೊಂದಿಗೆ ಹಂಚಿಕೊಳ್ಳಿ. ಆರ್ಥಿಕ ಸಂಕಷ್ಟದಿಂದ ಹೊರ ಬರುವ ದಾರಿ ಗೋಚರಿಸುವುದು. ನಿಮ್ಮ ವೃತ್ತಿಯನ್ನು ಪ್ರೀತಿಸಿ.

 

ಅನಗತ್ಯ ಭಯದಿಂದ ದೂರವಿರಿ. ನಿಮ್ಮ ಬಗ್ಗೆ ನೀವೇ ಬೇಸರ ಮಾಡಿಕೊಂಡರೆ ಹೇಗೆ? ಭಗವಂತ ನಿಮಗೆ ನೀಡಿದ ಬುದ್ಧಿಶಕ್ತಿಯೇ ನಿಮ್ಮ ಜೀವನಕ್ಕೆ ಆಧಾರವಾಗಿರುವುದು. ಮತ್ತೊಬ್ಬರೊಡನೆ ನಿಮ್ಮನ್ನು ಹೋಲಿಸಿಕೊಂಡು ಕೀಳರಿಮೆಯಲ್ಲಿ ಕೊರಗದಿರಿ.

 

ಮನೆಯ ವಾತಾವರಣಕ್ಕಿಂತ ಹೊರಗಿನ ವಾತಾವರಣವೇ ಹಿತವೆನಿಸುವುದು. ಆದರೆ ಮಡದಿ ಮಕ್ಕಳ ಆರೈಕೆಯು ನಿಮ್ಮ ಜವಾಬ್ದಾರಿ ಆಗಿರುವುದರಿಂದ ಆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾರಿರಿ. ಮಡದಿಯ ಸಂಗಡ ಮನಬಿಚ್ಚಿ ಮಾತಾಡಿ.

 

 

ನಿಮ್ಮ ಹಠಮಾರಿತನ ಧೋರಣೆಯು ನಿಮ್ಮನ್ನು ಸಂದಿಗ್ಧಕ್ಕೆ ಸಿಲುಕಿಸುವುದು. ಆದಷ್ಟು ಸೋತು ಗೆಲ್ಲುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

 

 

ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ದೈವಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತವೆ.

 

 

ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷ ುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿ ಮಾಡುವರು. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.

 

 

ಹಿರಿಯರನ್ನು ದೂರ ಇಡಬೇಡಿ ಮತ್ತು ಅವರ ದಿನಚರಿಗಳನ್ನು ದೂಷಿಸಬೇಡಿ. ಅವರ ಸೇವೆಯನ್ನು ಮಾಡಿ. ಇದು ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲಕರ.

ಹೊಸದಾದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು.

 

 

ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವುದು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವುದು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು.

 

ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವರನ್ನು ಪ್ರಾರ್ಥನೆ ಮಾಡಿ. ಆರೋಗ್ಯದ ಕಡೆ ಎಚ್ಚರವಿರಲಿ.

 

ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ, ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top