fbpx
ಭವಿಷ್ಯ

27 ಡಿಸೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ಡಿಸೆಂಬರ್ ೨೭, ೨೦೧೮
ಸೂರ್ಯೋದಯ :೦೭:೧೩
ಸೂರ್ಯಾಸ್ತ :೧೮:೦೫

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ – ೦೮:೦೩ ವರೆಗೆ
ನಕ್ಷತ್ರ : ಮಖಾ – ೧೧:೪೨ ವರೆಗೆ
ಯೋಗ : ಪ್ರೀತಿ – ೧೪:೫೨ ವರೆಗೆ
ಸೂರ್ಯ ರಾಶಿ -ಧನು

ಅಭಿಜಿತ್ ಮುಹುರ್ತ :೧೨:೧೭ – ೧೩:೦೦
ಅಮೃತಕಾಲ : ೦೯:೨೯ – ೧೦:೫೮
ರಾಹು ಕಾಲ: ೧೩:೫೯ – ೧೫:೨೦
ಗುಳಿಕ ಕಾಲ: ೦೯:೫೮ – ೧೧:೧೮
ಯಮಗಂಡ:೦೭:೧೭ – ೦೮:೩೭

ಗಣ್ಯಾತಿಗಣ್ಯರು ನಿಮ್ಮ ಸ್ನೇಹ ಬಯಸುವರು. ಇವುಗಳಿಂದಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಸ್ನೇಹಿತರು ನಿಮ್ಮ ನೆರವಿಗೆ ಬರುವುದರಿಂದ ಕೆಲಸಗಳು ಸುಗಮವಾಗಿ ನಡೆಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

 

ಮತ್ತೊಬ್ಬರಿಗೆ ವಹಿಸಿದ ಕೆಲಸದ ಬಗ್ಗೆ ನಿರ್ಲಪ್ತರಾಗದಿರಿ. ಕಾರ್ಯರಂಗದಲ್ಲಿ ಆಗುವ ಏರುಪೇರುಗಳು ನಿಮ್ಮ ಗಮನಕ್ಕೆ ಬರದೆ ಹೋಗಬಹುದು. ಯಶಸ್ಸು ಸಿಗಬೇಕಾದರೆ ನಿಮ್ಮ ಶ್ರಮ ಹಾಗೂ ಶ್ರದ್ಧೆ ಎರಡೂ ಬೇಕು. ಗುರು ಹಿರಿಯರ ಆಶೀರ್ವಾದವೂ ಅಗತ್ಯ.

 

ಬಹುಷಃ ಉಳಿತಾಯಕ್ಕೂ ನಿಮಗೂ ಆಗಿ ಬರುವುದಿಲ್ಲವೆಂದು ಕಾಣುತ್ತದೆ. ಅನೇಕ ಸಂದರ್ಭಗಳಲ್ಲಿ ಖರ್ಚು ನಿಮ್ಮನ್ನು ಬೆಂಬಿಡದೆ ಹಿಂಬಾಲಿಸಿಕೊಂಡು ಬರಲಿದೆ. ಹಾಗಾಗಿ ಪ್ರಯತ್ನ ಪಟ್ಟು ಉಳಿತಾಯದ ಕಡೆ ಗಮನ ಕೊಡಿ.

 

ಬದುಕಿನಲ್ಲಿ ಬರಲಿರುವ ತಿರುವು ನಿಮ್ಮ ಭಾಗ್ಯವನ್ನೇ ಬದಲಾಯಿಸುವುದು ಮತ್ತು ಅದರಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಅನಿರೀಕ್ಷಿತವಾಗಿ ನಡೆಯುವ ಘಟನೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತೋರಲಿದೆ.

 

 

ಮನೆಯಲ್ಲಿ ಜರುಗಲಿರುವ ಅಥವಾ ಜರುಗಿದ ಘಟನೆಗಳಿಗೆ ಹೆಚ್ಚಿನ ಮಹತ್ವ ಕೊಡದೆ ನಿಮ್ಮ ಕಾರ್ಯಗಳಲ್ಲಿ ಮಗ್ನರಾಗುವುದು ಉತ್ತಮ. ಅನವಶ್ಯಕ ವಿವಾದಗಳಿಗೆ ತಲೆ ಹಾಕಬೇಡಿ.

 

 

ನೀವು ಕೆಲಸದ ನಿಮಿತ್ತ ತೋರುವ ಸಾಂಸಾರಿಕ ಅಲಕ್ಷ ್ಯ ಕೌಟುಂಬಿಕ ಕಲಹಗಳಿಗೆ ಕಾರಣವಾಗುವುದು. ಆದಷ್ಟು ತಾಳ್ಮೆ ಪ್ರದರ್ಶಿಸುವುದು ಕ್ಷೇಮ. ಆತ್ಮಬಲದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವವು.

 

 

ಸಂಗಾತಿಯ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ನಿರ್ಣಾಯಕ ವಿಷಯಗಳ ಬಗ್ಗೆ ಅತಿ ನಂಬಿಕೆ ಬೇಡ. ಹಿತೈಷಿಗಳಿಂದಲೇ ಮೋಸ ಹೋಗುವ ಸಂಭವವಿದೆ.

 

 

ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನೇ ಗೊಂದಲಕ್ಕೆ ತಳ್ಳುವವು. ಸಕಾರಾತ್ಮಕವಾಗಿ ಯೋಚಿಸಿದ ನಿರ್ಧಾರಗಳು ಮಾತ್ರ ಉತ್ತಮ ಫಲ ನೀಡುವವು.

ಮಿತಿಮೀರಿ ಏರುತ್ತಿರುವ ಖರ್ಚನ್ನು ನಿಭಾಯಿಸಲು ಹೆಣಗಾಡುವಿರಿ. ಕೆಲಸದಲ್ಲಿ ಅನವಶ್ಯಕ ಅಡ್ಡಿ ಆತಂಕಗಳು ಬರಲಿವೆ. ವಾಹನ ಚಾಲನೆ ವೇಳೆ ಮುಂಜಾಗ್ರತೆ ಅತಿ ಅಗತ್ಯ. ಬಂಧುಗಳೊಂದಿಗಿನ ವೈರತ್ವ ನಿಮಗೆ ಮುಳುವಾಗುವುದು. ಮಹತ್ತರ ಕಾರ್ಯಗಳನ್ನು ಮುಂದೂಡಿದರೆ ಒಳಿತು.

 

 

ಬೇರೆಯವರ ಬಿರುಸು ನುಡಿಗಳಿಗೆ ಈಡಾಗುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ತಾಳ್ಮೆಯೇ ನಿಮ್ಮ ಅಸ್ತ್ರವಾಗಿರಲಿ.

 

ನಿಮ್ಮ ಆತುರ ಸ್ವಭಾವದಿಂದಾಗಿ ಆಗಬೇಕಾದ ಕೆಲಸಗಳು ಕೂಡಾ ಆಗದೆ ಹೋಗಬಹುದು. ಬಂಧುಮಿತ್ರರು ಕೊಡುವ ಸಲಹೆಗಳನ್ನು ಸ್ವೀಕರಿಸಿ. ಅವು ಮುಂದೆ ನಿಮಗೆ ಉಪಯೋಗವಾಗುವುದು.

 

ಆರಂಭಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ಹಣಕಾಸಿನ ಅಡೆತಡೆ ಉಂಟಾಗಲಿದ್ದು, ಇದಕ್ಕಾಗಿ ಸಾಲ ಮಾಡಬೇಕಾಗುವುದು, ಅನಿರೀಕ್ಷಿತವಾಗಿ ಕುಲದೇವತಾ ದರ್ಶನ ಪಡೆಯುವಿರಿ. ಯಾವುದೇ ಕೆಲಸಗಳನ್ನು ದುಡುಕಿನಿಂದ ಮಾಡದಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top