fbpx
ವಿಶೇಷ

ಅರಳೀ ಮರದ ಸುತ್ತ ನಾವು ಏಕೆ ಪ್ರದಕ್ಷಿಣಿ ಹಾಕಬೇಕು ಗೊತ್ತಾ ?

ನಮ್ಮ ಪುರಾಣಗಳಲ್ಲಿ ಮತ್ತು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ‘ಅರಳೀ ಮರ’ ದ ಕುರಿತು ವಿಶೇಷವಾದ ಮಾಹಿತಿಗಳಿವೆ. ಹೌದು, ಪ್ರಖ್ಯಾತಿ ಹೊಂದಿದ ಎಲ್ಲಾ ದೇವಾಲಯಗಳಲ್ಲೂ ಸಹಜವಾಗಿ ಅರಳೀ ಮರಗಳು ಇದ್ದೆ ಇರುತ್ತವೆ. ಹಾಗಾದರೆ ಅರಳೀ ಮರದ ಪ್ರಾಮುಖ್ಯತೆ ಏನು ಎಂಬುದನ್ನು ಮುಂದೆ ಓದೋಣ ಬನ್ನಿ…

ನಾವು ಸಾಮಾನ್ಯವಾಗಿ ದೇವಾಲಯವನ್ನು ಸಂದರ್ಶಸಿದಾಗ ಅಲ್ಲಿರುವ ಅರಳೀ ಮರಕ್ಕೆ ಪ್ರದಕ್ಷಿಣೆ ಹಾಕಿ ಬರುವುದು ನಮಗೆ ರೂಢಿಯಾಗಿ ಹೋಗಿದೆ ಅಲ್ಲವೇ? ಅಸಲಿಗೆ ಈ ನಿಯಮವನ್ನು ಏರ್ಪಾಟು ಮಾಡಿದ್ದೆ ನಮ್ಮ ಋಷಿಮುನಿಗಳೂ. ಏಕೆಂದರೆ ಅರಳೀ ಮರ ಸರ್ವಾಂತರ್ಯಾಮಿಯಾದ ಸಾಕ್ಷತ್ ಪರಶಿವನನ್ನು ನೆನಪಿಸುತ್ತದೆಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಹಾಗೆ ನೋಡಿದರೆ ಕೇವಲ ಧಾರ್ಮಿಕ ದೃಷಿಯಿಂದ ನೋಡದೆ ವೈಜ್ಞಾನಿಕವಾಗಿಯೂ ಗಮನಿಸಿದಾಗ ಅರಳೀ ಮರದ ಸುತ್ತ ಪ್ರದಕ್ಷಿಣೆ ಹಾಕುವುದು ಏಕೆ ಸಮಸಂಜಸ ಎಂಬ ಪ್ರಶ್ನೆಗೆ ನಮಗೆ ಸೂಕ್ತ ಉತ್ತರ ಸಿಗುತ್ತದೆ. ಅರಳೀ ಮರದಿಂದ ಆಮ್ಲಜನಕವೂ ಪುಷ್ಕಲವಾಗಿ ಉತ್ಪನ್ನವಾಗುತ್ತದೆ ಹಾಗೂ ಅರಳೀ ಮರ ತಣ್ಣನೆಯ ನೆರಳನ್ನು ಸಹ ನೀಡುತ್ತದೆ , ಹೀಗಾಗಿ ಅರಳೀ ಮರ ಸುತ್ತುವುದರಿಂದ ನಮಗೆ ಸ್ವಚ್ಛವಾದ ಗಾಳಿ ಸಿಗುತ್ತದೆ ಮತ್ತು ಶರೀರಕ್ಕೆ ಒಳ್ಳೆಯ ವ್ಯಾಯಾಮವು ಲಭಿಸುತ್ತದೆ. ಆದ್ದರಿಂದ ಅರಳೀ ಮರದ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂಬುದು ಎಲ್ಲಾ ವಿಧಾನಗಳಲ್ಲಿಯೂ ಸರಿಯಾದ ಸೂಚನೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top