fbpx
ಆಚಾರ-ವಿಚಾರ

ಕಲಶದ ಮೇಲೆ ತೆಂಗಿನ ಕಾಯಿ ಇಡುವುದರ ಹಿಂದಿನ ಉದ್ದೇಶ ಏನು ಗೊತ್ತೇ ?

ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಅಥವಾ ಮುಂತಾದ ಮಂಗಳ ಕಾರ್ಯಗಳಲ್ಲಿ ಹಿಂದೂ ಸಂಪ್ರದಾಯದಂತೆ ಕಲಶದ ಮೇಲೆ ತೆಂಗಿನ ಕಾಯಿ ಇಡುವುದನ್ನು ನಾವು-ನೀವು ನೋಡಿರುತ್ತೇವೆ ಅಥವಾ ಇಟ್ಟಿರುತ್ತವೆ. ಆದರೆ ಕಲಶದ ಮೇಲೆ ತೆಂಗಿನ ಕಾಯಿ ಏಕೆ ಇಡಲಾಗುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೇವಾ? ಇಲ್ಲವೆಂದಾದಲ್ಲಿ, ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನೆಂದು ತಿಳಿಯಲೆತ್ನಿಸೋಣ ಬನ್ನಿ…

“ತೆಂಗಿನಕಾಯಿಯ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಾಗಿಯೂ ಇಲ್ಲ . ತೆಂಗಿನ ಮರದ ಒಂದಲ್ಲ ಒಂದು ಭಾಗವು ಉಪಯೋಗಕ್ಕೆ ಬಂದೇ ಬರುತ್ತದೆ ಅಸಲಿಗೆ ತೆಂಗಿನ ಮರದ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುವುದರಿಂದಲೇ ಏನೋ ತೆಂಗಿನ ಮರಕ್ಕೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೈವೀ ಸ್ಥಾನವನ್ನು ಕಲ್ಪಿಸಿ ಅದನ್ನು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸಲಾಗುತ್ತದೆ ಎಂದು ಪುರಾಣ ಗ್ರಂಥಗಳಲ್ಲಿ ಹೇಳಲಾಗುತ್ತದೆ. ಹಾಗೂ ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದು ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡಲು ತೆಂಗಿನಕಾಯಿ ಒಂದು ಸಾಧನೆಯಾಗಿ ಬಳಸಲ್ಪಡುತ್ತದೆ ಎಂದು ತಿಳಿದು ಬಂದಿದ್ದು . ಹಾಗಾಗಿ ಕಲಶದ ಮೇಲೆ ತೆಂಗಿನ ಕಾಯಿ ಇಡಲಾಗುತ್ತದೆ ಎಂದು ತಿಳಿದು ಬರುತ್ತದೆ.”

ಹೀಗೆ ಪ್ರತಿಯೊಂದು ಹಿಂದೂ ಸಂಪ್ರದಾಯ ಅಥವಾ ಆಚರಣೆಯ ಹಿಂದೆ ಈ ರೀತಿ ಒಂದು ಸ್ಪಷ್ಟ ವೈಜ್ಞಾನಿಕ ಅಥವಾ ಆರೋಗ್ಯಕರ ಉದ್ದೇಶ ಇರುವುದು ಸೋಜಿಗವೇ ಸರೀ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top