ಸಮಾಚಾರ

ತಮಿಳುನಾಡಿಗೆ ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿಟಿ ರವಿ !

ಲೋಕಸಭಾ ಚುನಾವಣೆಯು ಇನ್ನೇನು ಸಮೀಪಿಸುತ್ತಿದ್ದು, ಎಲ್ಲಾ ಪಕ್ಷದವರು ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಭಾರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಬಿಜಿಪಿ ಭಾರಿ ಸಿದ್ದತೆಗಳನ್ನು ನಡೆಸುತ್ತಿದ್ದು.  ಮತ್ತೊಮ್ಮೆ ಗೆಲುವಿನ ಚುಕ್ಕಾಣಿ ಹಿಡಿಯಲು ಹಪಹಪಿಸುತ್ತಿದೆ. ಹೀಗಿರುವಾಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿಯನ್ನು ಮುರುಳೀಧರ್‌ ರಾವ್‌ ಮತ್ತು ರಾಜಸ್ಥಾನದ ಮಾಜಿ ಸಚಿವೆ ಕಿರಣ್‌ ಮಹೇಶ್ವರಿ ಅವರು ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೆ, ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್‌ ನಿಕೋಬಾರ್‌ಗೆ ಸಹ ಪ್ರಭಾರಿಯನ್ನಾಗಿ ನೇಮಿಸಲಾಗಿದೆ ಎಂಬ ವಿಚಾರಗಳು ಕೇಳಿ ಬಂದಿದ್ದು.
ಈ ರಾಜ್ಯಗಳ ಬಿಜೆಪಿ ಚುನಾವಣಾ ಉಸ್ತುವಾರಿಯನ್ನು ಕೇಂದ್ರ ಸಚಿವ ಪಿಯೂಷ್‌ ಗೊಯೆಲ್ ನಿರ್ವಹಿಸಲಿದ್ದಾರಂತೆ.

ಅಷ್ಟೇ ಅಲ್ಲದೆ, ಈಗಾಗಲೇ ರಾಜ್ಯ ಬಿಜೆಪಿಯ ಉಸ್ತುವಾರಿಯನ್ನು ಮುರುಳೀಧರ್‌ ರಾವ್‌ ಅವರೇ ನಿರ್ವಹಿಸುತ್ತಿದ್ದು ಚುನಾವಣೆ ವೇಳೆ ಮಾಜಿ ಸಂಸದೆಯೂ ಆಗಿರುವ ಕಿರಣ್‌ ಮಹೇಶ್ವರಿ ಸಹ ಪ್ರಭಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಆಮಿತ್‌ ಶಾ ಅವರ ಸೂಚನೆಯಂತೆ ಪ್ರಭಾರಿಗಳ ನೇಮಕ ನಡೆದಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್‌ ಅವರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top