ಮನೋರಂಜನೆ

ಅಭಿಮಾನಿಗಳಿಗೆ ಬೊಂಬಾಟ್ ನ್ಯೂಸ್ ಕೊಟ್ರು ಕಿಚ್ಚಾ ಸುದೀಪ್.

ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿರುವ ಚಿತ್ರ ಅಂದ್ರೆ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’. ಕನ್ನಡವೂ ಸೇರಿ ಒಟ್ಟು ಎಂಟು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ..

ಇಂಥಾ ಪೈಲವಾನ್ ಟೀಮ್ ನಿಂದ ಅಭಿಮಾನಿಗಳಿಗೆ ಬೊಂಬಾಟ್ ಸುದ್ದಿ ಸಿಕ್ಕಿದೆ. ‘ಪೈಲ್ವಾನ್’ ಸಿನಿಮಾದ ಮೊದಲ ಟೀಸರ್ ಡೇಟ್ ಬಹಿರಂಗೊಂಡಿದ್ದು ಸ್ವತಃ ಕಿಚ್ಚಾ ಸುದೀಪ್ ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಅನೌನ್ಸ್ ಮಾಡಿದ್ದಾರೆ. ಚಿತ್ರದ ಮೊದಲ ಟೀಸರ್ ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 15 ರಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿದೆಯಂತೆ. ‘ಪೈಲ್ವಾನ್’ ಎಂಟು ಭಾಷೆಗಳಲ್ಲಿ ಬರುತ್ತಿರುವ ಬಹುಭಾಷಾ ಸಿನಿಮಾವಾಗಿದ್ದು, ಮೊದಲು ಅಭಿಮಾನಿಗಳಿಗೋಸ್ಕರ ಕನ್ನಡದ ಟೀಸರ್ ರಿಲೀಸ್ ಮಾಡಲಿದ್ದಾರೆ.

 

 

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

ಕಿಚ್ಚನದ್ದು ಮೂರು ರೀತಿಯ ಪಾತ್ರ:
ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ದೇಹವನ್ನು ದಂಡಿಸಿ ಗಾತ್ರವನ್ನು ಹೆಚ್ಚಿಸಿಕೊಂಡಿದ್ದಾರೆ. ಅದಕ್ಕಾಗಿ ಮೊದಲ ಬಾರಿ ಸೀರಿಯಸ್ಸಾಗಿಯೇ ಜಿಮ್‌ನತ್ತ ಮುಖ ಮಾಡಿದ್ದಾರೆ! ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಮೂರು ರೀತಿಯಲ್ಲಿ ಫೈಟ್ ಮಾಡಲಿದ್ದಾರೆ. ಒಂದು ಶೇಡ್‍ನಲ್ಲಿ ಪೈಲ್ವಾನ್ ಆಗಿ ಕಾಣಿಸ್ತಾರೆ. ಇನ್ನೊಂದ್ಕಡೆ ಮಾಮೂಲಿ ಆ್ಯಕ್ಷನ್ನೂ ಇರುತ್ತೆ. ಪೋಸ್ಟರ್‍ಗಳಲ್ಲಿ ಈಗಾಗಲೇ ರಿವೀಲ್ ಆದಂತೆ ಕಿಚ್ಚ ಬಾಕ್ಸರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top