fbpx
ಸಮಾಚಾರ

ಅಂಬಿ ಪುತ್ರನ ‘ಅಮರ್’ ಸಿನಿಮಾದಲ್ಲಿ ದರ್ಶನ್ ನಟಿಸುತ್ತಾರಾ?

ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಬಾರಿ ನಾಯಕ ನಟನಾಗಿರೋ ಅಮರ್ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆಗಳು ಮನೆ ಮಾಡುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದೇ ಹೆಸರುವಾಸಿಯಾಗಿರುವ ನಾಗಶೇಖರ್ ಬಿಡುವಿಲ್ಲದೆ ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದಾರೆ.. ರೆಬೆಲ್ ಸ್ಟಾರ್ ಪುತ್ರನ ಮೊದಲ ಚಿತ್ರವಾಗಿರುವುದರಿಂದ ಚಿತ್ರದ ಮೇಲೆ ಒಂದು ರೀತಿ ನಿರೀಕ್ಷೆಗಳು ಹುಟ್ಟುಕೊಂಡಿವೆ.. ಇದೀಗ ಚಿತ್ರಕ್ಕೆ ಸಂಭಂದಿಸಿದ ಸುದ್ದಿಯೊಂದು ಹೊರಬಿದ್ದಿದ್ದು ಅದನ್ನು ಕೇಳಿದ ಪ್ರತಿಯೊಬ್ಬರು ಅಚ್ಚರಿ ಪಡುತ್ತಿದ್ದಾರೆ.. ಏನು ಆ ಆಶ್ಚರ್ಯದಾಯಕ ವಿಷಯ ಅಂತೀರಾ? ಮುಂದೆ ಓದಿ.

ಅಮರ್ ಸಿನಿಮಾಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಸಿಕ್ಕಿದೆ. ದರ್ಶನ್ ಅಮರ್ ಸಿನಿಮಾದ ಪುಟ್ಟ ಪಾತ್ರವೊಂದರಲ್ಲಿ ನಟನೆ ಮಾಡುತ್ತಿರುವ ಮಾಹಿತಿ ಹೊರಬಿದ್ದಿದೆ. ಆದರೆ ಅಮರ್ ಸಿನಿಮಾದಲ್ಲಿ ದರ್ಶನ್ ಪಾತ್ರ ಏಏನು ಅನ್ನೋದು ಮಾತ್ರ ಸಸ್ಪೆನ್ಸ್ ಆಗಿದೆ. ಅತಿಥಿ ನಟನಾಗಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಷ್ಟೇ ಈಗ ಬಹಿರಂಗವಾಗಿದೆಯಷ್ಟೆ.

ಅಂದಹಾಗೆ ಚಿತ್ರದಲ್ಲಿ ಅಭಿಷೇಕ್ ಬೈಕ್​ ರೇಸರ್​ ಪಾತ್ರದಲ್ಲಿ ನಟಿಸುತ್ತಿದ್ದು ಅವರಿಗೆ ತಾನ್ಯಾ ಹೋಪ್ ನಾಯಕಿಯಾಗಿ ನಟಿಸುತ್ತಿದ್ದಾಳೆ. ಉಳಿದಂತೆ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದು ಸತ್ಯಾ ಹೆಗ್ಡೆ ಅವರ ಕ್ಯಾಮರಾ ಕೈಚಳಕ ಇರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top