ಸಮಾಚಾರ

ಸಂಸದರ ಬ್ಯಾಡ್ಮಿಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಗೆಲುವು ಕಂಡ ರಾಜ್ಯದ ಸಂಸದರು.

ಸಂಸದರ ಬ್ಯಾಡ್ಮಿಟನ್ ಚಾಂಪಿಯನ್‌ಶಿಪ್‌ನಲ್ಲಿ ಇದೆ ಮೊದಲ ಬಾರಿಗೆ ಕರ್ನಾಟಕದ ಸಂಸದರೊಬ್ಬರು ಗೆಲುವಿನ ನಗೆ ಬೀರಿದ್ದಾರೆ., ಕಳೆದ ಮೂರು ವರ್ಷಗಳಿಂದ ‘ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ’ ವತಿಯಿಂದ ನಡೆಯುತ್ತಿರುವ ಸಂಸದರ ಬ್ಯಾಡ್ಮಿಟನ್ ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ಮೂರನೇ ಸೀಸನ್ ಕೂಡ ಮುಗಿದ್ದು ಕರ್ನಾಟಕದ ಸಂಸದ ಜಿಸಿ ಚಂದ್ರಶೇಖರ್ ಎರಡನೇ ರನ್ನರ್ ಅಪ್ಪ್ ಆಗಿ ಹೊರಹೊಮ್ಮಿದ್ದಾರೆ..

ಜನವರಿ 3ರಿಂದ 7ರ ವರೆಗೆ ನಡೆದ ಬ್ಯಾಡ್ಮಿಟನ್ ಚಾಂಪಿಯನ್‌ಶಿಪ್‌, ಮೂರನೇ ಸೀಸನ್ ನ ‘ಸೀನಿಯರ್ MPs ಸಿಂಗಲ್ಸ್’ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಕೆ.ಡಿ. ಸಿಂಗ್ ತಮ್ಮ ಅತ್ಯುತ್ತಮ ಪ್ರದರ್ಶನ ತೋರಿ ವಿನ್ನರ್ ಪಟ್ಟ ಗಳಿಸಿ ಟ್ರೋಫಿಗೆ ಮುತ್ತಿಟ್ಟರು. ಇನ್ನು ಅಷ್ಟೇ ಉತ್ತಮವಾಗಿ ಆಡಿದ ಹಿಮಾಚಲ ಪ್ರದೇಶದ ಸಂಸದ ಅರುಣ್ ಠಾಕೂರ್ ಮೊದಲ ರನ್ನರ್ ಅಪ್ ಹಾಗೂ ಕರ್ನಾಟಕದ ಜಿಸಿ ಚಂದ್ರಶೇಖರ್ ಎರಡನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ..

 

 

ಕೇವಲ ರಾಜಕೀಯದಲ್ಲಿ ಮಾತ್ರ ತಲ್ಲೀನರಾಗದೇ ಯುವಕರಿಗೆ ಸ್ಪೂರ್ತಿಯಾಗುವಂತಹ ಕ್ರೀಡಾ ಕಾರ್ಯಕ್ರಮಗಳಲ್ಲೂ ನಮ್ಮ ರಾಜ್ಯದ ಸಂಸದರು ಭಾಗವಹಿಸಿ ಜಯ ಗಳಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top