ಸಮಾಚಾರ

‘ಸಚಿನ್ ಗಿಂತ ವಿರಾಟ್ ಕೊಹ್ಲಿ ಗ್ರೇಟ್ ಬ್ಯಾಟ್ಸಮನ್’ ಎಂದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿರುದ್ಧ ಗರಂ ಆದ ನೆಟ್ಟಿಗರು !

ಕರಣ್ ಜೋಹರ್ ನಡೆಸಿಕೊಡುವ ಖಾಸಗಿ ಶೋ ನಲ್ಲಿ ಭಾಗವಹಿಸಿದ್ದ ಯುವ ಕ್ರಿಕೆಟ್ ಆಟಗಾರರಾದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ, ಇದೀಗ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅಷ್ಟಕ್ಕೂ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರವರ ಮೇಲೆ ನೆಟ್ಟಿಗರು ಗರಂ ಆಗಿದ್ದು ಏಕೆ ಗೊತ್ತೇ ?

ಕರಣ್ ಜೋಹರ್ ತಮ್ಮ ಶೋನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಕೊಹ್ಲಿ ಇವರಿಬ್ಬರಲ್ಲಿ ಯಾರು ಗ್ರೇಟ್ ಬ್ಯಾಟ್ಸ್ ಎಂದು ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರವರನ್ನು ಪ್ರಶ್ನೆ ಮಾಡುತ್ತಾರೆ, ಆಗ ಉತ್ತರಿಸಿದ ಈ ಇಬ್ಬರು ಯುವ ಆಟಗಾರರು ವಿರಾಟ್ ಕೊಹ್ಲಿ ಹೆಸರು ಹೇಳುತ್ತಾರೆ. ಇದರಿಂದಾಗಿ ಕೋಪಗೊಂಡಿರುವ ನೆಟ್ಟಿಗರು ಸಾಮಾಜಿಕ ಜಾಲ ತಾಣಗಳಲ್ಲಿ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರವರ ವಿರುದ್ಧ ಅಸಮಾಧಾನ ಹೊರಹಾಕಿದ್ದು ಸಚಿನ್ ರವರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸಮನ್ ಎಂದು ಹಾಡಿ ಹೊಗಳಿದ್ದಾರೆ ಮತ್ತು ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರವರನ್ನು ಟೀಕಿಸಿದ್ದಾರೆ.

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top