ಸಮಾಚಾರ

ಅಭಿಮಾನಿಯ ವರ್ತನೆಗೆ ರಾಕಿಂಗ್ ಸ್ಟಾರ್ ಯಶ್ ಬೇಸರ.

ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಬಿಡದ್ದಕ್ಕೆ ತನ್ನ ದೇಹಕ್ಕೆ ಬೆಂಕಿ ಹಚ್ಚಿಕೊಂಡಿದ್ದ ಅಭಿಮಾನಿ ನಿಧನ ಹೊಂದಿದ್ದಾನೆ. ಪಾವಗಡ ಮೂಲದವನಾದ ಪೀಣ್ಯ ಸಮೀಪದ ಲಗ್ಗೆರೆಯಲ್ಲಿ ನೆಲೆಸಿರುವ ರವಿ (28) ಆತ್ಮಹತ್ಯೆಗೆ ಯತ್ನಿಸಿ ಶೇ 80 ರಷ್ಟು ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ.

ತನಗೆ ಯಶ್‌ ನೋಡಲು ಸಿಗಲಿಲ್ಲ ಎನ್ನುವ ಬೇಸರದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಯಶ್‌ ಮನೆಯ ಕಾವಲು ಸಿಬ್ಬಂದಿ ಆತನನ್ನು ರಕ್ಷಿಸಿದಲ್ಲದೆ ಪೊಲೀಸ್‌ ಠಾಣೆಗೆ ವಿಷಯ ಮುಟ್ಟಿಸಿದ್ದರು. ಮನೆ ಮುಂದೆ ನೆರೆದಿದ್ದ ಇತರೆ ಅಭಿಮಾನಿಗಳು ಮತ್ತು ಸ್ಥಳೀಯರು ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಈ ವಿಷಯ ತಿಳಿದ ಯಶ್ ಆಸ್ಪತ್ರೆಗೆ ಹೋಗಿ ಆತನನ್ನು ಭೇಟಿ ಮಾಡಿ ಬಂದಿದ್ದರು. ಈ ವೇಳೆ ಬೇಸರ ವ್ಯಕ್ತಪಡಿಸಿದ ಯಶ್, “ಅಭಿಮಾನಿಯಾಗಿದ್ರೆ ದಯವಿಟ್ಟು ನಿಮ್ಮ ತಂದೆ ತಾಯಿನ ಚೆನ್ನಾಗಿ ನೋಡ್ಕೊಳಿ..ಇದೇ ಕೊನೆ ಯಾರೇ ನನ್ನ ಅಭಿಮಾನಿಗಳು ಹೀಗೆ ಮಾಡಿಕೊಂಡ್ರೆ ನಾನು ಮತ್ತೆ ಬರುವುದಿಲ್ಲ. ನನ್ನ ಮನಸ್ಸು ಕಲ್ಲು ಅಂದ್ಕೊಂಡ್ರು ಪರ್ವಾಗಿಲ್ಲ. ಈ ಥರ ಮಾಡೋದಾದ್ರೆ ಅವರು ಅಭೀಮಾನಿನೇ ಅಲ್ಲ.ಹೀಗೆ ಮಾಡಿದ್ರೆ ನನಗೂ ಹರ್ಟ್ ಆಗತ್ತೆ. ಇಂಥ ಘಟನೆಗೆ ಸಹಾಯ ಮಾಡಲ್ಲ.” ಎಂದರು

ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ಹುಟ್ಟು ಹಬ್ಬ ಆಚರಣೆ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿಯಿತು. ತಕ್ಷಣ ಆಸ್ಪತ್ರೆಗೆ ಬಂದೆ’ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top