ಸಮಾಚಾರ

ಕಳೆದ ವರ್ಷ ಭಾರತೀಯರು ಯಾವ ನಾಯಕನನ್ನು ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಿದರು ಗೊತ್ತಾ ? ನರೇಂದ್ರ ಮೋದಿನಾ ಅಥವಾ ರಾಹುಲ್ ಗಾಂಧಿನಾ ?- ಗೂಗಲ್ ಟ್ರೆಂಡ್ಸ್ ರಿಪೋರ್ಟ್ ನೋಡಿದ್ರೆ ಶಾಕ್ ಆಗ್ತೀರಾ !

ಕಳೆದ ವರ್ಷದಲ್ಲಿ ಭಾರತೀಯರು ಯಾವ ನಾಯಕನನ್ನು ಗೂಗಲ್ ನಲ್ಲಿ ಹೆಚ್ಚು ಹುಡುಕಿದರು ಎಂಬ ವಿಷಯದ ಕುರಿತು ಇಂಟರೆಸ್ಟಿಂಗ್ ಮಾಹಿತಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಗೂಗಲ್ ಬಿಡುಗಡೆ ಮಾಡಿದ್ದು ಅದರಲ್ಲಿ ಗೂಗಲ್ ಟ್ರೆಂಡ್ಸ್ ಪ್ರಕಾರ ರಾಹಿಲ್ ಗಾಂಧಿ ಮೇಲುಗೈ ಸಾಧಿಸಿದ್ದಾರೆ.

ಅಂದಹಾಗೆ 2018 ರಲ್ಲಿ ಆನ್‌ಲೈನ್ ಹುಡುಕಾಟದಲ್ಲಿ ರಾಹುಲ್‌ ಗಾಂಧಿ ಅತಿ ಹೆಚ್ಚು ಸರ್ಚ್ ಆಗಿರುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಇತ್ತೀಚಿನ ಗೂಗಲ್‌ ಟ್ರೆಂಡ್ಸ್ ರಿಪೋರ್ಟ್ ತಿಳಿಸಿದೆ.

ಹೌದು, ಗೂಗಲ್ ರಿಪೋರ್ಟ್ ನ ಮಾಹಿತಿ ಪ್ರಕಾರ ‘ವಿಶ್ವದಾದ್ಯಂತ ಇರುವ ಭಾರತೀಯರಲ್ಲಿ ‘100 ಜನರ ಪೈಕಿ 45 ಜನ ಗೂಗಲ್‌ನಲ್ಲಿ ರಾಹುಲ್ ಗಾಂಧಿಯನ್ನು ಹುಡುಕಿದರೆ, 34 ಜನ ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಹಿತಿಯನ್ನು ಹುಡುಕಿದ್ದಾರೆ’ ಎಂದು ತಿಳಿದು ಬಂದಿದೆ.

2014 ರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾಗ 100 ರ ಎಣಿಕೆಯಲ್ಲಿ 37 ಅಂಕ ಗಳಿಸಿದ್ದರು. ಆಗ ರಾಹುಲ್ ಗಾಂಧಿ ಕೇವಲ 4 ಅಂಕ ಗಳಿಸಿದ್ದರು.

ಆದರೆ ಈಗ ರಾಹುಲ್ ಗಾಂಧಿಯವರೇ ಆನ್‌ಲೈನ್ ಹುಡುಕಾಟದಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ರಾಜಕಾರಣಿ ಎಂದು ತಿಳಿದು ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ

ಒಟ್ಟಿನಲ್ಲಿ ಮೋದಿ ಅವರು ಗುಜರಾತಿನಲ್ಲಿ ಇಂದಿಗೂ ಹೆಚ್ಚು ಜನಪ್ರಿಯ ನಾಯಕರಾಗಿ ಮುಂದುವರೆದಿದ್ದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ, ಜನವರಿ ಹಾಗೂ ಏಪ್ರಿಲ್ 2018ರ ನಡುವಿನಲ್ಲಿ ಗಾಂಧಿ ಅವರ ಟ್ವೀಟ್ ಗಳ ರೀಟ್ವೀಟ್ ಸಂಖ್ಯೆ ಅತ್ಯಧಿಕವಾಗಿತ್ತು ಎಂದು ಮಿಶಿಗನ್ ವಿವಿ ಹೇಳಿದ್ದು ಮೋದಿ ಅವರು 44 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ, ರಾಹುಲ್ ಗಾಂಧಿ ಅವರು 7.6 ಮಿಲಿಯನ್ ಹಿಂಬಾಲಕರನ್ನು ಮಾತ್ರ ಹೊಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top