ಸಮಾಚಾರ

ನೀವು ಬಿ.ಪಿ.ಎಲ್ ಹಾಗೂ ಎ.ಪಿ.ಎಲ್ ಕಾರ್ಡ್ ಹೊಂದಿರುವವರೇ ? ಹಾಗಾದರೆ ಕೇಂದ್ರ ಸರ್ಕಾರ ನೀಡುತ್ತಿರುವ ಈ ಸೌಲಭ್ಯದ ಬಗ್ಗೆ ನೀವು ಈ ಕೂಡಲೇ ತಿಳಿದುಕೊಳ್ಳಲೇ ಬೇಕು !

ಬಿ.ಪಿ.ಎಲ್ ಹಾಗು ಎ.ಪಿ.ಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೇಂದ್ರ ಸರ್ಕಾರ ಒಂದು ಸಿಹಿ ಸಮಾಚಾರವನ್ನು ಹೊತ್ತು ತಂದಿದೆ.

ಹಾಗಾದರೆ ಅದೇನಪ್ಪ ಅಂತ ಸಿಹಿ ಸುದ್ದಿ ಅಂತೀರಾ ? ಮುಂದೆ ಓದಿ…

ಎಲ್ಲಾ ಬಿ.ಪಿ.ಎಲ್ ಹಾಗು ಎ.ಪಿ.ಎಲ್ ಕಾರ್ಡ್ ಹೊಂದಿರುವವರು ತಮ್ಮ ಕುಟುಂಬದವರೊಂದಿಗೆ ತಮ್ಮ-ತಮ್ಮ ಆಧಾರ್ ಕಾರ್ಡ್ ನೊಂದಿಗೆ ನಗರದ ಜಿಲ್ಲಾ ಆಸ್ಪತ್ರೆಗೆ ತೆರಳಿ, ಫಾರ್ಮ್ ತುಂಬಿಸಿ ಆ ಕ್ಷಣವೇ ಅರೋಗ್ಯ ಕಾರ್ಡ್ ಪಡೆಯಬಹುದಾದ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸಿದೆ.

ಅಂದಹಾಗೆ ಇದೇನಿದು ಅರೋಗ್ಯ ಕಾರ್ಡ್ ನ ವಿಶೇಷತೆ ಅಂತೀರಾ ?

ಬಿ.ಪಿ.ಎಲ್ ಕಾರ್ಡ್ ಇರುವವರು ಆರೋಗ್ಯ ಕಾರ್ಡ್ ಪಡೆದುಕೊಂಡರೆ ಅಂತವರಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಸಿಗಲಿದೆ (ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿ ಲೆಟರ್ ಪಡೆದ ಮೇಲೆ) ಹಾಗೂ ಎ.ಪಿ.ಎಲ್ ಕಾರ್ಡ್ ಇರುವವರಿಗೆ ಚಿಕಿತ್ಸಾ ವೆಚ್ಚದ ಬರಿ 30% ಮಾತ್ರ ಉಳಿದ 70 % ಕೇಂದ್ರ ಸರ್ಕಾರ ಭರಿಸಲಿದೆ ಎಂಬ ಮಾಹಿತಿ ಹೊರಬಿದ್ದಿದ್ದು. ಇದರಿಂದ ಮುಂದೆ ಬಿ.ಪಿ.ಎಲ್ ಹಾಗು ಎ.ಪಿ.ಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಭಾರಿ ಪ್ರಯೋಜನವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top