ಸಮಾಚಾರ

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ‘ಕನ್ನಡ ಕಹಳೆ’ – ಮರಾಠ ನಾಡಿನಲ್ಲಿ ಕನ್ನಡ ಮಾತನಾಡಿದ ಪಿಎಂ ಮೋದಿ ವಿಡಿಯೋ ವೈರಲ್ !

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಜನರನ್ನುದ್ದೇಶಿಸಿ ಅತ್ಯದ್ಭುತ ಭಾಷಣವನ್ನು ಮಂಡಿಸಿ ನೆರದಿದ್ದ ಜನರ ಮನಗೆದ್ದರೂ. ಪ್ರಧಾನಿ ಮೋದಿ ಅವರ ಭಾಷಣಕ್ಕೆ ತಲೆದೂಗಿದ ಜನರು ಕರತಾಳಗಳ ಮೂಲಕ ಪ್ರಧಾನಿ ಮೋದಿಯವರನ್ನು ಹುರಿದುಂಬಿಸಿದರು.

ಕರ್ನಾಟಕ ಗಡಿಯ ಸೊಲ್ಲಾಪುರದಿಂದ ಒಸ್ಮಾನಾಬಾದ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 211ರ ಚತುಷ್ಪಥ ಲೋಕಾರ್ಪಣೆ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿಯವರು ತಮ್ಮ ಭಾಷಣದ ಮಧ್ಯೆ ಕನ್ನಡದಲ್ಲಿ ಮಾತನಾಡುತ್ತಾ, ‘ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸಿ ಎಳ್ಳು ಬೆಲ್ಲ ತಿನ್ನಿ ಸಿಹಿ ಮಾತನಾಡಿ’ ಎಂದು ಹಾರೈಸಿದ್ದು ವಿಭಿನ್ನವಾಗಿತ್ತು ಮತ್ತು ವಿಶೇಷತೆಯಿಂದ ಕೂಡಿತ್ತು.

ಒಟ್ಟಿನಲ್ಲಿ ಮರಾಠ ನಾಡಿನಲ್ಲಿ ಕನ್ನಡ ಮಾತನಾಡಿದ ಪ್ರಧಾನಿ ಮೋದಿ ಅವರ ಕುರಿತು ಮೆಚ್ಚುಗೆಯ ನುಡಿಗಳು ಹರಿದು ಬಂದಿದ್ದು, ಪ್ರಧಾನಿ ಮೋದಿ ಕನ್ನಡ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಕನ್ನಡಿಗರಂತೂ ಫಿದಾ ಆಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top