fbpx
ಸಮಾಚಾರ

ಗೂಗಲ್ ಪ್ರಕಾರ ಭಾರತದ ಕೆಟ್ಟ ಸಿಎಂ ಇವರಂತೆ !

ಪ್ರಸ್ತುತ ಪ್ರಪಂಚದಲ್ಲಿ ಗೂಗಲ್ ಎಲ್ಲರ ಗುರುವಾಗಿದೆ. ಇಂಟರ್ನೆಟ್ ಇಲ್ಲದ ಲೋಕವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿರುವ ಸ್ಥಿತಿಗೆ ನಾವು ನೀವು ಬಂದು ತಲುಪಿದ್ದೇವೆ. ಹೀಗಿರುವಾಗ ಗೂಗಲ್ ಬಗ್ಗೆ ಹೇಳುವುದೇ ಬೇಕಿಲ್ಲ. ಪ್ರತಿಯೊಂದು ಪ್ರಶ್ನೆಗೂ ಉತ್ತರ ಕಾಯ್ದಿಟ್ಟಿರುವ ಗೂಗಲ್ ಇದೀಗ ‘ಬ್ಯಾಡ ಸಿಎಂ ಆಫ್ ಇಂಡಿಯಾ ಯಾರು?’ ಎಂಬ ಪ್ರಶ್ನೆಗೂ ಉತ್ತರ ನೀಡಿದೆ.

ಅಂದಹಾಗೇ ಗೂಗಲ್ ಪ್ರಕಾರ ಭಾರತದ ಕೆಟ್ಟ ಸಿಎಂ ಯಾರು ಗೊತ್ತಾ ?

ಹೌದು, ಗೂಗಲ್ ಪ್ರಕಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾರತದ ಕೆಟ್ಟ ಸಿಎಂ ಆಗಿದ್ದಾರೆ.

ಭಾರತದ ಪಪ್ಪು ಯಾರು? ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಹೇಗೆ ರಾಹುಲ್ ಗಾಂಧಿ ಅವರ ಹೆಸರು ಬರುತ್ತದೋ, ಹಾಗೇ ಈಡಿಯಟ್ ಎಂದು ಸರ್ಚ್ ಕೊಟ್ಟರೆ ಹೇಗೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಬರುತ್ತದೋ ಅದೇ ರೀತಿ ಇದೀಗ ಭಾರತದ ಕೆಟ್ಟ ಸಿಎಂ ಯಾರು ಎಂದು ಸರ್ಚ್ ಮಾಡಿದರೆ ಗೂಗಲ್ ಪಿಣರಾಯಿ ವಿಜಯನ್ ಅವರ ಹೆಸರನ್ನು ಸೂಚಿಸುತ್ತದೆ.

ಹೌದು, ನೀವು ಕೂಡ ಗೂಗಲ್ ನಲ್ಲಿ ಭಾರತದ ಕೆಟ್ಟ ಸಿಎಂ ಯಾರು ಎಂದು ಸರ್ಚ್ ಮಾಡಿದರೆ ನಿಮಗೂ ಸಹ ಗೂಗಲ್ ಪಿಣರಾಯಿ ವಿಜಯನ್ ಅವರ ಹೆಸರನ್ನು ತೋರಿಸುತ್ತದೆ. ಬೇಕಾದರೆ ಈ ಕೂಡಲೇ ನೀವು ಟ್ರೈ ಮಾಡಿ ನೋಡಿ ?!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top