ಸಮಾಚಾರ

ಆ ಒಂದು ‘ಚಾನೆಲ್’ ವಿರುದ್ಧ ಕೆಂಡಾಮಂಡಲವಾದ ರಾಕಿಂಗ್ ಸ್ಟಾರ್ ಯಶ್.

“ಒಂದು ನಿರ್ದಿಷ್ಟ ಮಾಧ್ಯಮದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ರಾಕಿಂಗ್ ಸ್ಟಾರ್ ಯಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಚಾನೆಲ್ ಮಾತ್ರ ಊಹಾಪೋಹ ಹಬ್ಬಿಸುತ್ತಿದೆ. ಊಹಾಪೋಹಗಳಿಗೆಲ್ಲಾ ನಾನು ಉತ್ತರ ಕೊಡಲ್ಲ” ಅಂತ ಗರಂ ಆಗಿ ಹೇಳಿದ್ದಾರೆ.. ಅಷ್ಟಕ್ಕೂ ಯಶ್ ಅವ್ವರು ಈ ರೀತಿ ಹೇಳಿದ್ದು ಯಾಕೆ ಅಂತೀರಾ? ಮುಂದೆ ಓದಿ.

ಇಂದು ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿದ್ದ ರಾಕಿಂಗ್ ಸ್ಟಾರ್ ಯಶ್ ವಿವರಣೆಯನ್ನು ನೀಡಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಇದು ಇಂದಿಗೆ ಮುಗಿಯುವ ತನಿಖೆಯಲ್ಲ. ಐಟಿ ವಿಚಾರಣೆ ಇನ್ನೂ ಎರಡು ವರ್ಷಗಳ ಕಾಲ ನಡೆಯಲಿದ್ದು, ಅಧಿಕಾರಿಗಳು ಕರೆದಾಗೆಲೆಲ್ಲ ನಾವು ವಿಚಾರಣೆಗೆ ಹಾಜರಾಗುತ್ತೇವೆ. ಐಟಿ ದಾಳಿ ವೇಳೆ ಮನೆಯಲ್ಲಿ ಏನು ಸಿಕ್ಕಿದೆ ಎಂದು ಅಧಿಕಾರಿಗಳಿಗೆ ಗೊತ್ತು. ಆದರೆ, ಮನೆಯಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಕೆಲವೊಂದು ಮಾಧ್ಯಮಗಳು ಗಾಳಿ ಸುದ್ದಿ ಹಬ್ಬಿಸುತ್ತಿವೆ. ಈ ವದಂತಿಗಳೆಲ್ಲ ಸುಳ್ಳು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದ ಕಣ್ತಪ್ಪಿಸಿ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ಊಹಾಪೋಹಗಳಿಗೆಲ್ಲಾ ಉತ್ತರಿಸಲ್ಲ. ಸಾರ್ವಜನಿಕ ವ್ಯಕ್ತಿ ಎಂದಾಕ್ಷಣ ಇಷ್ಟಬಂದಂತೆ ಒಬ್ಬರ ಬಗ್ಗೆ ಮಾತನಾಡಿಕೊಂಡು, ತೇಜೋವಧೆ ಮಾಡಿಕೊಂಡು ಇದ್ದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರುವವರಲ್ಲ.. ನನಗೆ ಯಾರ ಮೇಲೂ ವೈಯಕ್ತಿಕವಾಗಿ ಏನೂ ದ್ವೇಷ ಇಲ್ಲ, ಪತ್ರಕರ್ತರು ಅದನ್ನು ಇಟ್ಕೊಳ್ಳಬೇಡಿ” ಎಂದು ಆ ಒಂದು ಮಾದ್ಯಮಕ್ಕೆ ಯಶ್ ಖಡಕ್ ಪ್ರತಿಕ್ರಿಯೆ ನೀಡಿದರು.

”ಯಾವ ಮಾಧ್ಯಮ, ಲೋಗೋ ಮುಟ್ಟಿ ಹೇಳಿ” ಎಂದು ಮಾಧ್ಯಮದವರು ಕೇಳಿದಾಗ, ”ಅದು ಜನರಿಗೆ ಗೊತ್ತಾಗುತ್ತೆ” ಅಂತ ಯಶ್ ಹೇಳಿದರು.. ಕೊನೆಗೂ ತಮ್ಮ ವಿರುದ್ಧ ತೇಜೋವಧೆ ಮಾಡುತ್ತಿರುವ ಆ ಚಾನೆಲ್ ಯಾವುದು ಎಂದು ಯಶ್ ಹೇಳಲೇ ಇಲ್ಲ… ಆ ಚಾನೆಲ್ ಯಾವುದು ಎಂದು ನಿಮಗೆ ಗೊತ್ತಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top