ಮನೋರಂಜನೆ

KGF Chapter 2ರಲ್ಲಿ ರಮ್ಯಾ ಕೃಷ್ಣ, ಸಂಜಯ್ ದತ್? ಈ ಸುದ್ದಿ ನಿಜವೇ?

ಪ್ರಪಂಚಾದ್ಯಂತ ಸದ್ದು ಮಾಡುತ್ತಿರುವ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ – 1 ಸಿನಿಮಾ ಗೆ ಪ್ರೇಕ್ಷಕ ಮಹಾಶಯನಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು , ಪ್ರಶಾಂತ್ ನೀಲ್ ರವರ ನಿರ್ದೇಶನಕ್ಕೆ , ಯಶ್ ಆಕ್ಟಿಂಗ್ ಗೆ , ರವಿಬಸೂರು ಸಂಗೀತಕ್ಕೆ ಮತ್ತು ಭುವನ್ ಗೌಡ ಕ್ಯಾಮೆರಾ ವರ್ಕ್ ಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

 

 

ಕುತೂಹಲಭರಿತವಾದ ಕೆಜಿಎಫ್ ಸಿನಿಮಾದ ನೋಡಿದ ಎಲ್ಲಾ ಭಾಷೆಯ ಪ್ರೇಕ್ಷಕರು ಇದೀಗ ಚಾಪ್ಟರ್ – 2 ಯಾವಾಗ ಬಿಡುಗಡೆ ಆಗುವುದೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಹೀಗಿರುವಾಗ ಕೆಜಿಎಫ್ ಚಾಪ್ಟರ್ – 2 ಸಿನಿಮಾದಲ್ಲಿ ಹೊಸ ಪಾತ್ರಗಳು ಇರಲಿವೆ ಎಂಬ ಸುದ್ದಿ ಎಲ್ಲೆಡೆ ಭರ್ಜರಿಯಾಗಿ ಹರಿದಾಡುತ್ತಿದ್ದು. ಚಾಪ್ಟರ್ – 2 ನಲ್ಲಿ ಮುಖ್ಯವಾಗಿ ರಾಷ್ಟ್ರಪತಿ ಪಾತ್ರದಲ್ಲಿ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರದಲ್ಲಿ ರಮ್ಯಾ ಕೃಷ್ಣ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತಿದೆ.

ಇನ್ನೂ ಇದರ ಜತೆಗೆ ಇನ್ನೊಂದಿಷ್ಟು ಪಾತ್ರಗಳ ಹೆಸರು ಕೇಳಿಬಂದಿದೆ. ಅವುಗಳಲ್ಲಿ ಮುಖ್ಯವಾಗಿ ಸಂಜಯ್ ದತ್, ರವಿಶಂಕರ್, ಶರತ್ ಲೋಹಿತಾಶ್ವ, ಸಂಪತ್ ಕುಮಾರ್ ಮತ್ತು ಮಧು ಗುರುಸ್ವಾಮಿ. ಒಟ್ಟಿನಲ್ಲಿ ಈ ಸುದ್ದಿಗಳ ಕುರಿತಾಗಿ ಚಿತ್ರತಂಡ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ.ಕೆಜಿಎಫ್ ಚಾಪ್ಟರ್ -2 ನಲ್ಲಿ ಅಭಿನಯಿಸಲಿರುವರೇ ರಮ್ಯಾ ಕೃಷ್ಣ ಮತ್ತು ಸಂಜಯ್ ದತ್?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top