ಉದ್ಯೋಗ

ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ ಕೆಎಸ್ಆರ್‌ಟಿಸಿ: ಅರ್ಜಿ ಹಾಕಲು ಜನವರಿ 15 ಕೊನೆ ದಿನಾಂಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ITS Consultant ಹುದ್ದೆ ಭರ್ತಿ ಮಾಡುತ್ತಿದ್ದು ಅದಕ್ಕಾಗಿ ಅರ್ಜಿ ಆಹ್ವಾನಿಸಿದೆ.ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಬೇಕಾಗಿದ್ದು ಹಾಗೂ ಮೈಸೂರು ಮತ್ತು ಇತರ ಸ್ಥಳಗಳಿಗೆ ಆಗಾಗ ಭೇಟಿ ನೀಡಬೇಕಾಗುತ್ತದೆ.

ಹುದ್ದೆಯ ವಿವರ ಇಂತಿದೆ :

ಅರ್ಹತೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ (ಎಲೆಕ್ಟ್ರಾನಿಕ್ಸ್&ಕಮ್ಯನಿಕೇಷನ್) ವಿತ್ ಪಿಎಂ ಸರ್ಟಿಫೈಡ್ ವ್ಯಾಸಂಗ ಮಾಡಿರಬೇಕು. ಎರಡು ವರ್ಷಗಳ ಗುತ್ತಿಗೆ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ವಿಸ್ತರಣೆಯನ್ನು ಸಹ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಕಾಲಾವಕಾಶ :

ಜನವರಿ 3 ರಿಂದ ಜನವರಿ 15ರೊಳಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ.

ಹೀಗೆ ಅರ್ಜಿ ಸಲ್ಲಿಸಿ :

ಆನ್‌ಲೈನ್ ಮೂಲಕ ಸಿಗುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಭ್ಯರ್ಥಿಗಳು ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವಾಗ ಅಂಚೆ ಲಕೋಟೆ ಮೇಲೆ application for ITS Consultant ಎಂದು ನಮೂದಿಸಿರಬೇಕು.

ಅರ್ಜಿಗಳನ್ನು ಇಲ್ಲಿ ಕಳುಹಿಸಿ :

ಅರ್ಜಿಗಳನ್ನು ಸಲ್ಲಿಸಲು ವಿಳಾಸ
ಮ್ಯಾನೇಜಿಂಗ್ ಡೈರೆಕ್ಟರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಟ್ರಾನ್ಸ್‌ಪೋರ್ಟ್ ಹೌಸ್
ಕೆ.ಎಚ್.ರಸ್ತೆ
ಶಾಂತಿನಗರ
ಬೆಂಗಳೂರು ೫೬೦೦೨೭

ಈ ಹುದ್ದೆಯ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ನೀವು ತಿಳಿಯಬೇಕಿಂದಾದಲ್ಲಿ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top