fbpx
ಸಮಾಚಾರ

ಟೀಮ್ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್‌ಮನ್‌ ಯಶ್‌ನ ಭೇಟಿಯಾಗಿದ್ದು ಏಕೆ?

ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೇಶಾದ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿದೆ.. ಅದಕ್ಕೆ ದೊಡ್ಡ ಉದಾಹರಣೆ ಎಂದರೆ ಸಿನಿಮಾ ಇಂದಿನವರೆಗೂ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶವ್ಯಾಪ್ತಿ ರೆಕಗ್ನೈಸೇಷನ್ ಗಳಿಸಿಕೊಂಡಿರುವ ಯಶ್ ಅವರನ್ನು ಟೀಂ ಇಂಡಿಯಾದ ಸ್ಟಾರ್ ಆಟಗಾರರೊಬ್ಬರು ಭೇಟಿ ಮಾಡಿ ಅವರ ಜೊತೆ ಮಾತನಾಡಿದ್ದಾರೆ.

 

 

ಆರಂಭಿಕ ಪಂದ್ಯಗಳಲ್ಲೇ ಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಂಚಲನ ಮೂಡಿಸಿರುವ ಯುವ ಆಟಗಾರ ಪೃಥ್ವಿ ಶಾ ನಟ ಯಶ್ ಅವರನ್ನು ಭೇಟಿ ಮಾಡಿದ್ದಾರೆ. ಪೃಥ್ವಿ ಶಾ ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು. ಇತ್ತ ನಟ ಯಶ್ ಕೂಡ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ತಂಗಿದ್ದರು. ಹೀಗಾಗಿ ಇಂದು ನಟ ಯಶ್ ಅವರನ್ನ ಭೇಟಿ ಮಾಡಿದ್ದು, ಕೆಲ ಸಮಯ ಅವರ ಜೊತೆ ಮಾತನಾಡಿ ಪೃಥ್ವಿ ಶಾ ಕಾಲ ಕಳೆದಿದ್ದಾರೆ.

ಕಳೆದ ವರ್ಷದ ಅಂಡರ್-19 ವಿಶ್ವಕಪ್ ನಲ್ಲಿ ಭಾರತಕ್ಕೆ ಗೆದ್ದುಕೊಟ್ಟ ಕೀರ್ತಿ ಪ್ರಥ್ವಿ ಶಾಗೆ ಸಲ್ಲುತ್ತದೆ.. ವಿಶ್ವಕಪ್ ವಿಜೇತ ತಂಡಕ್ಕೆ ಪೃಥಿ ನಾಯಕನಾಗಿದ್ದರು.. ನಂತರ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆಡಿದ ಮೊದಲ ಪಂದ್ಯದಲ್ಲೇ ಶತಕ ಭರಿಸಿ ದಾಖಲೆ ಬರೆದಿದ್ದರು. ಸದ್ಯ ಗಾಯದ ಸಮಸ್ಯೆಯಿಂದ ಪೃಥ್ವಿ ಶಾ ಆಸ್ಟ್ರೇಲಿಯಾ ಸರಣಿಯಿಂದ ಹೊರ ಉಳಿದಿದ್ದಾರೆ. ವಿಶ್ರಾಂತಿಯಲ್ಲಿರುವ ಶಾ, ಇಂದು ಯಶ್ ಭೇಟಿಯಾಗಿದ್ದನ್ನ, ಯಶ್​ ಫ್ಯಾನ್ಸ್​ ಕ್ಲಬ್​ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top