ಸಮಾಚಾರ

ಪಾಂಡ್ಯ, ರಾಹುಲ್‌ಗೆ ಆಘಾತಕಾರಿ ಸುದ್ದಿ- ಇಬ್ಬರನ್ನೂ ಅಮಾನತು ಮಾಡಿದ ಬಿಸಿಸಿಐ, ತಕ್ಷಣವೇ ಹಿಂತಿರುಗಲು ಆದೇಶ.

ಮಹಿಳೆಯ ಮೇಲೆ ಅಸಭ್ಯವಾಗಿ ಕಾಮೆಂಟ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ಗೆ ಮತ್ತೂಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಇಬ್ಬರನ್ನೂ ಆಸ್ಟ್ರೇಲಿಯ ವಿರುದ್ಧದ ಮೂರು ಏಕದಿನಗಳಿಗೆ ಅಮಾನತು ಮಾಡಲಾಗಿದೆ, ಕೂಡಲೇ ಭಾರತಕ್ಕೆ ಹೊರಡಬೇಕೆಂದು ಬಿಸಿಸಿಐ ಸೂಚಿಸಿದೆ.ಇಬ್ಬರ ವಿರುದ್ಧ ವಿಚಾರಣೆಗೆ ಆದೇಶಿಸಲಾಗಿದೆ. ಫ‌ಲಿತಾಂಶ ಬರುವವರೆಗೆ ಅಮಾನತು ಮುಂದುವರಿಯಲಿದೆ. ಇದರ ಪರಿಣಾಮ ಮುಂದಿನ ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲೂ ಅವರು ಆಡುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ತನಿಖೆ ಸಂಬಂಧ ಮುಂದಿನ ಆದೇಶ ಬರುವವರೆಗೆ ತಂಡದಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್​​ ನೇಮಿತ ಆಡಳಿತಗಾರರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್‌ ರೈ, ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆಎಲ್‌ ರಾಹುಲ್‌ ಅವರಿಗೆ 2 ಏಕದಿನ ಪಂದ್ಯ ನಿಷೇಧ ಹೇರಲು ಶಿಫಾರಸು ಮಾಡಿದ್ದಾರೆ. ಆದರೆ ಆಡಳಿತ ಮಂಡಳಿ ಇನ್ನೋರ್ವ ಸದಸ್ಯ ದಿಯಾನ ಇದುಲ್ಜಿ ಅವರು ವಿಚಾರವನ್ನು ಬಿಸಿಸಿಐ ಕಾನೂನು ವಿಭಾಗಕ್ಕೆ ವರ್ಗಾವಣೆಗೆ ಶಿಫಾರಸು ನೀಡಿದ್ದಾರೆ.

ಕರಣ್ ಜೋಹರ್ ನಡೆಸಿಕೊಟ್ಟ ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ಪಾಂಡ್ಯ ಹಾಗೂ ರಾಹುಲ್ ಮಹಿಳೆಯರ ಬಗ್ಗೆ ಸ್ತ್ರೀದ್ವೇಷಿ, ಕಾಮಪ್ರಚೋದಕ ಹೇಳಿಕೆಗಳನ್ನು ನೀಡಿದ್ದರು. ಈ ವೇಳೆ ರಾಹುಲ್‌ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಹಾರ್ದಿಕ್‌ ಮುಕ್ತವಾಗಿ ಮಾತುಗಳನ್ನಾಡಿದ್ದರು. ಇದು ವ್ಯಾಪಕ ಟೀಕೆಗೆಗಳಿಗೆ ಗುರಿಯಾಗಿತ್ತು. ಬಳಿಕ ಪಶ್ಚಾತಾಪ ವ್ಯಕ್ತಪಡಿಸಿದ ಪಾಂಡ್ಯ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದರು. ಆದರೂ ಬಿಸಿಸಿಐ ಆಡಳಿತ ಸಮಿತಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top