ಮನೋರಂಜನೆ

‘ಪೆಟ್ಟಾ’ ನಿರ್ದೇಶಕನ ಮುಂದಿನ ಬಹುಭಾಷಾ ಚಿತ್ರಕ್ಕೆ ‘ಕಿಚ್ಚಾ ಸುದೀಪ್’ ನಾಯಕ?

ತೆಲುಗಿನ ಜನಪ್ರಿಯ ಸಿನಿಮಾಗಳಾದ ಪಿಜ್ಜಾ’, ‘ಜಿಗರ್‌ಥಂಡ ’, ‘ಇರೈವಿ’ ಹಾಗೂ ‘ಮಕ್ರ್ಯುರಿ’ ಚಿತ್ರಗಳ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ಇತ್ತೀಚಿಗಷ್ಟೇ ರಜನಿಕಾಂತ್‌ ನಟನೆಯ ಪೇಟಾ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.
ವಿಶೇಷ ಎಂಬಂತೆ ಇದೀಗ ಸ್ಟಾರ್ ನಿರ್ದೇಶಕ ಸುದೀಪ್‌ ನಟನೆಯ ಕನ್ನಡ ಚಿತ್ರ ಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರಂತೆ.

ಹೌದು, ಎಲ್ಲಾ ಅಂದುಕೊಂಡಂತೆ ಆದರೆ ಪೇಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನೂ ಪೇಟಾ ಚಿತ್ರವನ್ನ ಕರ್ನಾಟಕದಲ್ಲಿ ವಿತರಕ ಜಾಕ್ ಮಂಜು ಮತ್ತು ಸೈಯದ್ ಸಲಾಂ ವಿತರಣೆ ಮಾಡುತ್ತಿದ್ದು . ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೇಟಾ ನಿರ್ದೇಶಕ ಮತ್ತು ಜಾಕ್ ಮಂಜು ಈ ಬಗ್ಗೆ ಸುಳಿವು ನೀಡಿದ್ದಾರೆ ”
ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ನನಗೆ ನಂಬಿಕೆ ಇದೆ. ಅವರ ಚಿತ್ರಗಳನ್ನ ನೋಡಿದ್ದೇನೆ. ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಜೋಡಿಯಲ್ಲಿ ಒಂದು ಕಥೆ ಮಾಡಿ, ಸಿನಿಮಾ ಮಾಡ್ಬೇಕು ಎಂಬ ಆಸೆ ಇದೆ. ಅದು ಪ್ರಗತಿಯಲ್ಲಿದೆ, ನೋಡೋಣ” ಎಂದು ಜಾಕ್ ಮಂಜು ತಿಳಿಸಿದ್ದಾರೆ.

ಅಂದಹಾಗೆ ಜಾಕ್ ಮಂಜು ಅವರು ಸುದೀಪ್ ಅವರ ಆಪ್ತ ಸ್ನೇಹಿತ ಬಹುತೇಕ ಸುದೀಪ್ ಸಿನಿಮಾಗಳಲ್ಲಿ ಜಾಕ್ ಮಂಜು ನಿರ್ಮಾಪಕರಾಗಿ, ವಿತರಕರಾಗಿ ಕೆಲಸ ಮಾಡ್ತಾರೆ. ಹಾಗಾಗಿ, ಸುದೀಪ್ ಗೆ ಕಾರ್ತಿಕ್ ಜೋಡಿಯಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಕಥೆ ಓಕೆ ಆದ್ರೆ, ಖಂಡಿತಾ ಈ ಸಿನಿಮಾ ಬರೋದು ಪಕ್ಕಾ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top