fbpx
ಮನೋರಂಜನೆ

ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬದವರಿಗೆ ನೆರವು ನೀಡಿದ ಸುಮಲತಾ, ಅಭಿಷೇಕ್‌.

ಅಂಬರೀಶ್ ಅವರ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿಗಳ ಮನೆಗೆ ಸುಮಲತಾ ಅಂಬರೀಷ್‌ ಹಾಗೂ ಅಭಿಷೇಕ್‌ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಗಳ ಕುಟುಂಬಸ್ಥರಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿಸುತ್ತೇನೆ. ಅಂಬರೀಷ್‌ ಸಾವು ದೈವೇಚ್ಚೆಯಾಗಿದ್ದು, ಆದರೆ ಅಭಿಮಾನಿಗಳು ಮೃತಪಟ್ಟಿರುವುದು ಬೇಸರದ ಸಂಗತಿ.” ಎಂದು ಹೇಳಿದರು.

 

 

ಸುಮಲತಾ ಅವರು ಅಂಬರೀಷ ಅವರ ಮೃತ ಅಭಿಮಾನಿ ತಮ್ಮಯ್ಯ ಮನೆಯವರಿಗೆ ಹೆದರಬೇಡಿ. ಕಷ್ಟ ಇದ್ದರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ಜೊತೆ ನಾವಿರುತ್ತೇವೆ ಎಂದು ಸಾಂತ್ವನ ಹೇಳಿ 30 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದ್ದಾರೆ. ಇದೇ ವೇಳೆ ಸುಮಲತಾ ಅವರಿಗೆ ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ದರು. ಬಳಿಕ ಗೊರವನಹಳ್ಳಿಯ ಮೃತ ಸುರೇಂದ್ರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಶೋಭಾ ಅವರಿಗೂ ಆರ್ಥಿಕ ನೆರವು ನೀಡಿದರು.

ಆತ್ಮಹತ್ಯೆ ಮಾಡಿಕೊಂಡಿದ್ದವರು ಯಾರು?
ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ಅಂಬಿ ಅಭಿಮಾನಿ ತಮ್ಮಯ್ಯ ಅಂಬರೀಷ್‌ ನಿಧನದ ಸುದ್ದಿ ತಿಳಿದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಜತೆಗೆ ಗೊರವನಹಳ್ಳಿಯ ಸುರೇಂದ್ರ ಅಂಬರೀಷ್‌ ಅಂತಿಮ ದರ್ಶನ ಪಡೆದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top