fbpx
ಸಮಾಚಾರ

ಅನ್ನ-ನೀರು ಮುಟ್ಟಲ್ಲ, 30 ವರ್ಷಗಳಿಂದ ಕೇವಲ ಟೀ ಕುಡಿದೇ ಬದುಕಿದ್ದಾಳೆ ಈಕೆ!

ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ , ಇನ್ನು ಈ ಚುಮುಚುಮು ಚಳಿಯಲ್ಲಿ 4-5 ಬಾರಿಯಾದ್ರೂ ಟೀ, ಕಾಫಿ ಕುಡಿಯಬೇಕು ಅಂತ ಅನ್ನಿಸುತ್ತೆ. ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ.

ಅತಿ ಹೆಚ್ಚು ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಈ ಮಹಿಳೆ ಕೇವಲ ಟೀ ಕುಡಿದು ಬದುಕುತ್ತಿದ್ದರೂ ಸಂಪೂರ್ಣ ಆರೋಗ್ಯವಾಗಿದ್ದಾರೆ. ಛತ್ತೀಸ್​ಗಢದ ಕೊರಿಯಾ ಜಿಲ್ಲೆಯ ಬರದಿಯಾ ಹಳ್ಳಿಯಲ್ಲಿ ವಾಸವಿರುವ ಪಿಲ್ಲಿದೇವಿ ತಮ್ಮ 11 ನೇ ವಯಸ್ಸಿನಿಂದಲೇ ಊಟ, ತಿಂಡಿ, ನೀರು ಬಿಟ್ಟು ಕೇವಲ ಚಹಾವನ್ನೇ ಅವಲಂಬಿಸಿದ್ದಾರೆ. ಇವರ ವಿಶಿಷ್ಟ ಜೀವನ ಶೈಲಿಯಿಂದ ತಮ್ಮ ಗ್ರಾಮದಲ್ಲಿ ‘ಚಾಯ್​ ವಾಲಿ ಚಾಚಿ’ ಎಂದೇ ಜನಪ್ರಿಯವಾಗಿದ್ದಾರೆ.

ತಮ್ಮ ಮಗಳು ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ದಿನ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾ ಕೂಟಕ್ಕೆ ಹೋಗಿದ್ದಳು. ಆ ದಿನ ಮನೆಗೆ ವಾಪಸ್ ಬಂದಾಗಿನಿಂದ ಆಕೆ ನೀರು ಮತ್ತು ಆಹಾರವನ್ನು ತಿನ್ನುವುದನ್ನು ಬಿಟ್ಟಳು. ಮೊದಲಿಗೆ ಟೀ ಜೊತೆ ಬಿಸ್ಕಟ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಆದ್ರೆ ಕೆಲ ತಿಂಗಳ ನಂತರ ಬಿಸ್ಕಟ್ ಮತ್ತು ಬ್ರೆಡ್ ತಿನ್ನೋದನ್ನು ಬಿಟ್ಟಳು ಎಂದು ಮಹಿಳೆಯ ತಂದೆ ರತಿ ರಾಮ್ ಹೇಳಿದ್ದಾರೆ.

ವೈದ್ಯರ ಬಳಿ ಪರೀಕ್ಷಿಸಿದೆವು, ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ ಎಂದು ವೈದ್ಯರು ದೃಢ ಪಡಿಸಿದರು ಎಂದು ಆಕೆಯ ಸಹೋದರ ತಿಳಿಸಿದ್ದಾರೆ. ಮಾನವ ದೇಹ ಕೇವಲ ಟೀ ಕುಡಿದು 33 ವರ್ಷ ಬದುಕುವುದು ವೈಜ್ಞಾನಿಕವಾಗಿ ಅಸಾಧ್ಯ, ಆದರೆ ಇದೊಂದು ಪವಾಡ ಎಂದು ಜಿಲ್ಲಾ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top